ಫುಟ್‌ಬಾಲ್‌: ಗೋಕುಲಮ್‌ ಎಫ್‌ಸಿಗೆ ಜಯಭೇರಿ

7

ಫುಟ್‌ಬಾಲ್‌: ಗೋಕುಲಮ್‌ ಎಫ್‌ಸಿಗೆ ಜಯಭೇರಿ

Published:
Updated:
ಫುಟ್‌ಬಾಲ್‌: ಗೋಕುಲಮ್‌ ಎಫ್‌ಸಿಗೆ ಜಯಭೇರಿ

ಶಿಲ್ಲಾಂಗ್‌: ಗೋಕುಲಮ್‌ ಕೇರಳ ಎಫ್‌ಸಿ ತಂಡ ಶನಿವಾರ ಇಲ್ಲಿ ನಡೆದ ಹೀರೊ ಇಂಡಿಯಾ ಮಹಿಳೆಯರ ಫುಟ್‌ಬಾಲ್‌ ಲೀಗ್‌ ಪಂದ್ಯದಲ್ಲಿ ಮೊದಲ ಗೆದ್ದಿತು.

ಗೋಕುಲಮ್ ತಂಡ 6–1 ಗೋಲುಗಳಲ್ಲಿ ಇಂದಿರಾಗಾಂಧಿ ಅಕಾಡೆಮಿ ಎದುರು ಜಯಿಸಿತು. ಕೇರಳ ತಂಡದ ಇಕ್ವಪುತ್‌ ಫಾಜಿಲಾ ಐದು ಗೋಲು ಗಳಿಸಿದರು. 32, 44, 45, 58 ಹಾಗೂ 76ನೇ ನಿಮಿಷಗಳಲ್ಲಿ ಅವರು ಚೆಂಡನ್ನು  ಗೋಲುಪೆಟ್ಟಿಗೆ ಸೇರಿಸಿದರು. 81ನೇ ನಿಮಿಷದಲ್ಲಿ ಈ ತಂಡಕ್ಕೆ ಅನಿತಾ ರಾವತ್‌ ಆರನೇ ಗೋಲು ಗಳಿಸಿಕೊಟ್ಟರು.

ಇಂದಿರಾಗಾಂಧಿ ತಂಡಕ್ಕೆ ಸುಮಿತ್ರಾ ಕಾಮರಾಜ್‌ (24ನೇ ನಿ.) ಏಕೈಕ ಗೋಲು ಹೊಡೆದರು. ಗೋಕುಲಮ್ ತಂಡ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿತು. ರಕ್ಷಣಾ ವಿಭಾಗದಲ್ಲಿಯೂ ಪ್ರಬಲವಾಗಿದ್ದ ಈ ತಂಡ ಎದುರಾಳಿ ಆಟಗಾರರು ಗೋಲು ದಾಖಲಿಸದಂತೆ ಎಚ್ಚರಿಕೆಯಿಂದ ಆಡಿತು.

ಜಿದ್ದಾಜಿದ್ದಿನ ಪೈಪೋಟಿಯ ನಡುವೆಯೂ ಇಂದಿರಾಗಾಂಧಿ ತಂಡ ಶುಭಾರಂಭ ಮಾಡಿತು. 24ನೇ ನಿಮಿಷದಲ್ಲಿ ಈ ತಂಡ 1–0 ಗೋಲಿನ ಮುನ್ನಡೆ ಪಡೆದಾಗ ಗೋಕುಲಮ್‌ ತಂಡದ ಆಟಗಾರ್ತಿಯರು ಒತ್ತಡಕ್ಕೆ ಒಳಗಾಗಲಿಲ್ಲ.

ಉತ್ತಮ ಯೋಜನೆ ರೂಪಿಸಿದ ಈ ಆಟಗಾರ್ತಿಯರು ಗೋಲಿನ ಮಳೆ ಸುರಿಸಿದರು. ತಂಡದ ಇತರೆ ಆಟಗಾರ್ತಿಯರಿಂದ ಪಾಸ್‌ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾಗುತ್ತಿದ್ದ ಫಾಜಿಲಾ ಎದುರಾಳಿ ತಂಡದ ಆಟಗಾರ್ತಿಯರನ್ನು ಜಾಣ್ಮೆಯಿಂದ ವಂಚಿಸಿ ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry