ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥಾಲಿ ರಾಜ್‌ಗೆ ‘ವರ್ಷದ ಶ್ರೇಷ್ಠ ಆಟಗಾರ್ತಿ’ ಗೌರವ

ಬ್ಯಾಡ್ಮಿಂಟನ್ ಸ್ಪರ್ಧಿಗಳಾದ ಕಿದಂಬಿ ಶ್ರೀಕಾಂತ್, ಪಿ.ವಿ ಸಿಂಧುಗೆ ಪ್ರಶಸ್ತಿ
Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಭಾರತ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಶನಿವಾರ ‘ವರ್ಷದ ಶ್ರೇಷ್ಠ ಆಟಗಾರ್ತಿ’ ಪ್ರಶಸ್ತಿ  ಪ್ರದಾನ ಮಾಡಲಾಯಿತು.

ತೆಲಂಗಾಣ ಕ್ರೀಡಾ ಪತ್ರಕರ್ತರ ಸಂಘ ನೀಡುವ 2017ರ ಆವೃತ್ತಿಯ ಪ್ರಶಸ್ತಿಗಳನ್ನು ಶನಿವಾರ ಇಲ್ಲಿ ನೀಡಲಾಯಿತು. ಬ್ಯಾಡ್ಮಿಂಟನ್‌  ತಾರೆಗಳಾದ ಕಿದಂಬಿ ಶ್ರೀಕಾಂತ್ ಹಾಗೂ ಪಿ.ವಿ ಸಿಂಧು ಅವರು ಕ್ರಮವಾಗಿ  ಪುರುಷರ ಮತ್ತು ಮಹಿಳೆಯರ ವಿಭಾಗಗಳ ಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಿಥಾಲಿ ರಾಜ್ ಅವರ ಅನುಪಸ್ಥಿತಿಯಲ್ಲಿ ಅವರ ಪೋಷಕರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶ್ರೀಕಾಂತ್ ಅವರಿಗೆ ಹಿರಿಯ ಕ್ರಿಕೆಟಿಗ ಎನ್‌.ಶಿವಲಾಲ್ ಯಾದವ್ ಅವರು ಪ್ರಶಸ್ತಿ ನೀಡಿದರೆ, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಸಿಂಧುಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಹಿರಿಯ ಕ್ರಿಕೆಟಿಗ ವಿ.ವಿ.ಎಸ್‌.ಲಕ್ಷ್ಮಣ್ ಅವರು ಬ್ಯಾಡ್ಮಿಂಟನ್‌ ಕೋಚ್ ಗೋಪಿಚಂದ್ ಅವರಿಗೆ ‘ವರ್ಷದ ಶ್ರೇಷ್ಠ ಕೋಚ್‌’ ಪ್ರಶಸ್ತಿ ನೀಡಿದರು.

ಹಿರಿಯ ಹಾಕಿ ಆಟಗಾರ ಎನ್‌.ಮುಕೇಶ್ ಕುಮಾರ್ ಅವರಿಗೆ  ‘ಜೀವ
ಮಾನ ಸಾಧನೆ’ ಪ್ರಶಸ್ತಿ ಲಭಿಸಿದೆ. ಹೈದರಾ
ಬಾದ್ ಕ್ರಿಕೆಟ್ ತಂಡಕ್ಕೆ ‘ವರ್ಷದ ಉತ್ತಮ ತಂಡ’ ಪ್ರಶಸ್ತಿ ಯನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಮ್‌.
ಎಸ್‌.ಕೆ ಪ್ರಸಾದ್ ಅವರು ನೀಡಿದರು. ಜಿಮ್ನಾಸ್ಟಿಕ್ಸ್ ಸ್ಪರ್ಧಿ ಬಿ.ಅರುಣಾ ಬುದ್ಧಾ ರೆಡ್ಡಿ ಅವರಿಗೆ ‘ವರ್ಷದ ಉತ್ತಮ ಸಾಧನೆ’ ಪ್ರಶಸ್ತಿ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT