ಶ್ರೀಗಳ 111ನೇ ಜನ್ಮದಿನೋತ್ಸವಕ್ಕೆ ಸಿದ್ಧಗಂಗಾ ಮಠ ಸಜ್ಜು

7

ಶ್ರೀಗಳ 111ನೇ ಜನ್ಮದಿನೋತ್ಸವಕ್ಕೆ ಸಿದ್ಧಗಂಗಾ ಮಠ ಸಜ್ಜು

Published:
Updated:
ಶ್ರೀಗಳ 111ನೇ ಜನ್ಮದಿನೋತ್ಸವಕ್ಕೆ ಸಿದ್ಧಗಂಗಾ ಮಠ ಸಜ್ಜು

ತುಮಕೂರು: ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವ ಭಾನುವಾರ (ಏ.1ರಂದು) ನಡೆಯಲಿದ್ದು, ಇದಕ್ಕಾಗಿ ಮಠ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಮಠದ ಅಂಗಳವಷ್ಟೇ ಅಲ್ಲದೆ ಇಡೀ ತುಮಕೂರು ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ನಗರದ ಪ್ರಮುಖ ರಸ್ತೆಗಳಲ್ಲಿ  ಶುಭಾಶಯ ಫಲಕ, ಬ್ಯಾನರ್‌ಗಳನ್ನು ಹಾಕಲಾಗಿದೆ. ಮಠದ ಹಳೆಯ ವಿದ್ಯಾರ್ಥಿಗಳು, ನಾಡಿನ ವಿವಿಧ ಕಡೆಯ ಭಕ್ತರು, ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಮಠದ ಸಿಬ್ಬಂದಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ.

ವೇದಿಕೆ ಕಾರ್ಯಕ್ರಮ: ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ 10 ಸಾವಿರಕ್ಕೂ ಹೆಚ್ಚು ಆಸನಗಳನ್ನು ಹಾಕಿಸಲಾಗಿದೆ. ಬೃಹತ್ ವೇದಿಕೆ ರೂಪಿಸ

ಲಾಗಿದೆ. ಬೆಳಿಗ್ಗೆ 10.30ಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಭಾಗವಹಿಸುವರು. ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ನುಡಿನಮನ ಅರ್ಪಿಸುವರು.

ಸ್ವಾಮೀಜಿ ದರ್ಶನ: ಬೆಳಿಗ್ಗೆ 7 ಗಂಟೆಯಿಂದಲೇ ಶ್ರೀಗಳು ಭಕ್ತರಿಗೆ ದರ್ಶನ ನೀಡುವರು. ನೂಕುನುಗ್ಗಲಾಗದಂತೆ ಭಕ್ತರೇ ಸಹಕರಿಸಿ ದರ್ಶನ ಪಡೆಯಬೇಕು ಎಂದು ಮಠದ ಆಡಳಿತ ಸಿಬ್ಬಂದಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry