ಗಡುವಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

7
ಪತಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಎಐಎಡಿಎಂಕೆ ನಾಯಕಿ

ಗಡುವಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

Published:
Updated:
ಗಡುವಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

ಬೆಂಗಳೂರು: ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟ ಪತಿ ನಟರಾಜನ್ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ, ಪೆರೋಲ್ ಅವಧಿ ಮುಗಿಯಲು ಮೂರು ದಿನ ಬಾಕಿ ಇರುವಂತೆಯೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಸಾಗಿದ್ದಾರೆ.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಸಜಾಬಂದಿಯಾಗಿರುವ ಶಶಿಕಲಾ, ಪತಿಯ ಅಂತ್ಯಸಂಸ್ಕಾರಕ್ಕೆಂದು 15 ದಿನಗಳ (ಮಾರ್ಚ್‌ 20ರಿಂದ ಏ. 3ರವರೆಗೆ) ತುರ್ತು ಪೆರೋಲ್ ಪಡೆದು

ಕೊಂಡಿದ್ದರು. ಶನಿವಾರ ಬೆಳಿಗ್ಗೆ 9 ಗಂಟೆಗೆ ನಿವಾಸದಿಂದ ಹೊರಟಿದ್ದ ಶಶಿಕಲಾ, ಸಂಜೆ 5 ಗಂಟೆಗೆ ಜೈಲಿಗೆ ಬಂದು ಸೇರಿದರು. 

‘ತಮಿಳುನಾಡಿನ ತಂಜಾವೂರು ಜಿಲ್ಲೆಯ ಪರಿಶುತ್ತಮ್‌ನಗರದ ಮನೆಯಲ್ಲಿ ವಾಸವಿರಬೇಕು. ಮಾಧ್ಯಮಕ್ಕೆ ಸಂದರ್ಶನ ನೀಡಬಾರದು ಹಾಗೂ ರಾಜಕೀಯ ಪ್ರಚಾರ ಮಾಡಬಾರದು ಎಂಬ ಷರತ್ತುಗಳನ್ನು ಪೆರೋಲ್‌ಗೆ ವಿಧಿಸಿದ್ದೆವು. ಅವುಗಳನ್ನು ಶಶಿಕಲಾ ಪಾಲಿಸಿದ್ದಾರೆ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry