ಮಂಗಳವಾರ, ಜೂಲೈ 7, 2020
24 °C

ಭಾರತ ಜಗತ್ತಿನ ಎರಡನೇ ಅತಿ ಹೆಚ್ಚು ಮೊಬೈಲ್‌ ಫೋನ್‌ ಉತ್ಪಾದಕ ರಾಷ್ಟ್ರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭಾರತ ಜಗತ್ತಿನ ಎರಡನೇ ಅತಿ ಹೆಚ್ಚು ಮೊಬೈಲ್‌ ಫೋನ್‌ ಉತ್ಪಾದಕ ರಾಷ್ಟ್ರ

ನವದೆಹಲಿ: ಜಗತ್ತಿನ ಅತಿ ಹೆಚ್ಚು ಮೊಬೈಲ್‌ ಉತ್ಪಾದನೆ ಮಾಡುವ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಕುರಿತು ಐಟಿ ಸಚಿವ ರವಿ ಶಂಕರ್‌ ಪ್ರಸಾದ್ ಮತ್ತು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಅವರೊಂದಿಗೆ ಭಾರತೀಯ ಸೆಲ್ಯುಲಾರ್ ಅಸೋಸಿಯೇಷನ್‌(ಐಸಿಎ) ಮಾಹಿತಿ ಹಂಚಿಕೊಂಡಿದೆ.

ಮೊಬೈಲ್‌ ಫೋನ್‌ಗಳ ಉತ್ಪಾದನೆ ಪ್ರಮಾಣದಲ್ಲಿ ಭಾರತ ಇದೀಗ ಎರಡನೇ ಸ್ಥಾನ ಹೊಂದಿದೆ ಎಂದು ಐಸಿಎ ರಾಷ್ಟ್ರೀಯ ಅಧ್ಯಕ್ಷ ಪಂಕಜ್‌ ಮೊಹಿಂದ್ರೊ ಮಾ.28ರಂದು ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಎಚ್‌ಎಸ್‌, ಚೀನಾದ ನ್ಯಾಷನಲ್‌ ಬ್ಯೂರೊ ಆಫ್‌ ಸ್ಟ್ಯಾಟಿಸ್ಟಿಕ್ಸ್‌ ಹಾಗೂ ವಿಯೆಟ್ನಾಂ ಜನರಲ್‌ ಸ್ಟ್ಯಾಟಿಸ್ಟಿಕ್ಸ್‌ ಕಚೇರಿಗಳ ಮಾಹಿತಿಯನ್ನು ಐಸಿಎ ಬಳಸಿಕೊಂಡಿದೆ.

2014ರಲ್ಲಿ 30 ಲಕ್ಷ ಯುನಿಟ್‌ ಮೊಬೈಲ್‌ ಫೋನ್‌ಗಳ ಉತ್ಪಾದನೆ ಹೊಂದಿದ್ದ ಭಾರತ 2017ರ ಹೊತ್ತಿಗೆ 1.1 ಕೋಟಿ ಮೊಬೈಲ್‌ ಉತ್ಪಾದನೆ ನಡೆಸಿದೆ. ದೇಶದಲ್ಲಿ ಮೊಬೈಲ್‌ ಫೋನ್‌ ಉತ್ಪಾದನೆ ಹೆಚ್ಚಳದಿಂದ ಸಾಧನಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ.

2017ರ ವರೆಗೂ ಮೊಬೈಲ್‌ ಉತ್ಪಾದನೆಯಲ್ಲಿ  ಚೀನಾ ನಂತರದ ಸ್ಥಾನದಲ್ಲಿ ವಿಯೆಟ್ನಾಂ ಸ್ಥಾನ ಪಡೆದಿತ್ತು.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಫ್‌ಟಿಟಿಎಫ್‌(ಫಾಸ್ಟ್‌ ಟ್ರ್ಯಾಕ್‌ ಟಾಸ್ಕ್‌ ಫೋರ್ಸ್‌) 2019ರ ಹೊತ್ತಿಗೆ ಭಾರತದಲ್ಲಿ 50 ಕೋಟಿ ಮೊಬೈಲ್‌ ಫೋನ್‌ ಉತ್ಪಾದನೆಯ ಗುರಿ ನಿಗದಿ ಪಡಿಸಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.