ಶನಿವಾರ, ಡಿಸೆಂಬರ್ 14, 2019
20 °C

ಬಾಲಿವುಡ್‌ಗೆ ಮತ್ತೆ ಪ್ರಿಯಾಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ಗೆ ಮತ್ತೆ ಪ್ರಿಯಾಂಕಾ

ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಹಾಲಿವುಡ್‌ನಲ್ಲಿ ‘ಬೇವಾಚ್‌’ ಸಿನಿಮಾ ಹೆಸರು ತಂದು ಕೊಟ್ಟಿಲ್ಲವಾದರೂ, ಕ್ವಾಂಟಿಕೊ ಟಿವಿ ಸರಣಿ ಮೂಲಕ ಅಲ್ಲಿ ಗುರುತಿಸಿಕೊಂಡಿದ್ದರು. ಅವರು ಹಾಲಿವುಡ್‌ಗೆ ಹಾರಿದ ಬಳಿಕ ಇನ್ನೇನು ಬಾಲಿವುಡ್‌ನಲ್ಲಿ ಪ್ರಿಯಾಂಕಾ ಪಯಣ ಮುಗಿದಂತೆ ಎಂದು ಅನೇಕರುಭಾವಿಸಿದ್ದರು. ಆದರೆ ಪ್ರಿಯಾಂಕಾ ಈಗ ಸಲ್ಮಾನ್‌ ಖಾನ್‌ ನಾಯಕನಟನಾಗಿರುವ ‘ಭಾರತ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿಸಲಿಕ್ಕಾಗಿಯೇ ಅವರು ‘ಕ್ವಾಂಟಿಕೊ’ ತಂಡದಿಂದ ಹೊರಬರಲು ನಿರ್ಧರಿಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

‘ಭಾರತ್‌’ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವವರು ಅಲಿ ಅಬ್ಬಾಸ್‌ ಜಾಫರ್‌. ಪ್ರಿಯಾಂಕಾ ಅವರ ಸ್ನೇಹಿತನಾಗಿರುವ ಅಲಿ ಈಚೆಗೆ ನ್ಯೂಯಾರ್ಕ್‌ ಪ್ರವಾಸ ಹೋಗಿದ್ದಾಗ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿ, ಕಥೆಯನ್ನೂ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್ ಆಗಿರುವ ಪ್ರಿಯಾಂಕಾ ‘ಭಾರತ್’ ಸಿನಿಮಾಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿ ನಿಜವಾಗಿದ್ದಲ್ಲಿ ಸಲ್ಮಾನ್‌ –ಪ್ರಿಯಾಂಕಾ ಜೋಡಿಯಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರ ಇದಾಗಲಿದೆ. ಈ ಹಿಂದೆ ‘ಸಲಾಂ ಎ ಇಷ್ಕ್‌’, ‘ಗಾಡ್‌ ತುಸ್ಸಿ ಗ್ರೇಟ್‌ ಹೋ’, ‘ಮುಜ್ಸೆ ಶಾದಿ ಕರೊಂಗಿ’ ಚಿತ್ರಗಳಲ್ಲಿ ನಟಿಸಿದ್ದರು.

ಪ್ರತಿಕ್ರಿಯಿಸಿ (+)