ಶುಕ್ರವಾರ, ಡಿಸೆಂಬರ್ 6, 2019
25 °C

‘ಗೋಲ್ಡ್‌’ ಕೋಸ್ಟ್‌ನಲ್ಲಿ ಚಿನ್ನದ ಕನಸು...

Published:
Updated:
‘ಗೋಲ್ಡ್‌’ ಕೋಸ್ಟ್‌ನಲ್ಲಿ ಚಿನ್ನದ ಕನಸು...

21ನೇ ಆವೃತ್ತಿಯ ಕಾಮನ್‌ವೆಲ್ತ್‌ ಕೂಟಕ್ಕೆ ಕ್ಷಣಗಣನೆ ಶುರುವಾಗಿದೆ. ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ಏಪ್ರಿಲ್‌ 4ರಿಂದ 15ರವರೆಗೆ ನಡೆಯುವ ಕ್ರೀಡಾ ಉತ್ಸವದಲ್ಲಿ ಕಾಮನ್‌ವೆಲ್ತ್‌ ರಾಷ್ಟ್ರಗಳ ಸ್ಪರ್ಧಿಗಳು ಪದಕಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಭಾರತದ 210 ಮಂದಿ ಈ ಬಾರಿ ಪದಕದ ಕನಸಿನೊಂದಿಗೆ ಕಾಂಗರೂಗಳ ನಾಡಿಗೆ ಹೋಗಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿದ್ದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್‌ ಮೇಲೆ ಅಪಾರ ನಿರೀಕ್ಷೆ ಇಡಲಾಗಿದೆ. ಜಾವೆಲಿನ್‌ ಎಸೆತ ಸ್ಪರ್ಧಿ ನೀರಜ್‌ ಚೋಪ್ರಾ, ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌, ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌, ಸರಿತಾ ದೇವಿ, ಜಿಮ್ನಾಸ್ಟ್‌  ಅರುಣಾ ಬುದ್ಧಾರೆಡ್ಡಿ, ಶೂಟರ್‌ಗಳಾದ ಜಿತು ರಾಯ್‌, ಹೀನಾ ಸಿಧು ಅವರೂ ಭರವಸೆ ಹೆಚ್ಚಿಸಿದ್ದಾರೆ.**

ಪ್ರಮುಖ ಸ್ಪರ್ಧೆಗಳ ಸೇರ್ಪಡೆ

ಅಥ್ಲೆಟಿಕ್ಸ್‌,1930

ಬಾಕ್ಸಿಂಗ್,1930

ಈಜು,1930

ಕುಸ್ತಿ,1930

ರೋಡ್‌ ಸೈಕ್ಲಿಂಗ್‌,1938

ವೇಟ್‌ ಲಿಫ್ಟಿಂಗ್‌,1950

ಬ್ಯಾಡ್ಮಿಂಟನ್‌,1966

ಶೂಟಿಂಗ್‌,1966

ಹಾಕಿ,1998

ನೆಟ್‌ಬಾಲ್‌,1998

ಪವರ್‌ಲಿಫ್ಟಿಂಗ್‌,2002

ರಗ್ಬಿ ಸೆವೆನ್ಸ್‌,1998

ಸ್ಕ್ವಾಷ್‌,1998

ಟೇಬಲ್‌ ಟೆನಿಸ್‌,2002

**

6

 ಇದುವರೆಗೂ ನಡೆದ ಎಲ್ಲಾ ಕೂಟಗಳಲ್ಲಿ ಭಾಗವಹಿಸಿದ ದೇಶಗಳು. ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಸ್ಕಾಟ್ಲೆಂಡ್‌ ಮತ್ತು ವೇಲ್ಸ್‌ ಈ ಸಾಧನೆ ಮಾಡಿವೆ.

12

ಕೂಟಗಳಲ್ಲಿ ಆಸ್ಟ್ರೇಲಿಯಾ ತಂಡ ಅತಿ ಹೆಚ್ಚು ಪದಕ ಗೆದ್ದ ಸಾಧನೆ ಮಾಡಿದೆ. ಇಂಗ್ಲೆಂಡ್‌ ಏಳು ಕೂಟಗಳಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು. ಕೆನಡಾ ಒಂದು ಕೂಟದಲ್ಲಿ ಅತಿ ಹೆಚ್ಚು ಪದಕ ಗೆದ್ದಿತ್ತು.

20

ಇದುವರೆಗೂ ನಡೆದಿರುವ ಒಟ್ಟು ಕೂಟಗಳು

22

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡಲಾಗಿರುವ ಅಧಿಕೃತ ಕ್ರೀಡೆಗಳು. ಕೆಲ ಕ್ರೀಡೆಗಳು ಐಚ್ಛಿಕವಾಗಿದ್ದು ಆತಿಥ್ಯ ವಹಿಸುವ ದೇಶಗಳು ನಿಗದಿತ ಕೂಟದಲ್ಲಿ ಅವುಗಳನ್ನು ಸೇರಿಸಿಕೊಳ್ಳಬಹುದಾಗಿದೆ.

560

ಅಥ್ಲೆಟಿಕ್ಸ್‌ನಲ್ಲಿ ಇಂಗ್ಲೆಂಡ್‌ ಇದುವರೆಗೂ ಗೆದ್ದಿರುವ ಒಟ್ಟು ಪದಕಗಳು

**

**

ಟೆನಿಸ್‌ನಲ್ಲಿ ಪದಕ ಗೆದ್ದವರು

ಸೋಮದೇವ್‌ ದೇವವರ್ಮನ್‌

ಗೆದ್ದ ಪದಕ: ಚಿನ್ನ

ವಿಭಾಗ: ಪುರುಷರ ಸಿಂಗಲ್ಸ್‌

ವರ್ಷ: 2010

***

ಸಾನಿಯಾ ಮಿರ್ಜಾ

ಗೆದ್ದ ಪದಕ: ಬೆಳ್ಳಿ

ವಿಭಾಗ: ಮಹಿಳೆಯರ ಸಿಂಗಲ್ಸ್‌

ವರ್ಷ: 2010

**

ಮಹೇಶ್‌ ಭೂಪತಿ–ಲಿಯಾಂಡರ್‌ ಪೇಸ್‌

ಗೆದ್ದ ಪದಕ: ಕಂಚು

ವಿಭಾಗ: ಪುರುಷರ ಡಬಲ್ಸ್‌

ವರ್ಷ: 2010

**

ಸಾನಿಯಾ ಮಿರ್ಜಾ–ರಶ್ಮಿ ಚಕ್ರವರ್ತಿ

ಗೆದ್ದ ಪದಕ: ಕಂಚು

ವಿಭಾಗ: ಮಹಿಳೆಯರ ಡಬಲ್ಸ್‌

ವರ್ಷ: 2010

**

ಸ್ಕ್ವಾಷ್‌ನಲ್ಲಿ ಚಿನ್ನ ಗೆದ್ದವರು

ದೀಪಿಕಾ ಪಳ್ಳಿಕಲ್‌–ಜೋಷ್ನಾ ಚಿಣ್ಣಪ್ಪ

ವಿಭಾಗ: ಮಹಿಳೆಯರ ಡಬಲ್ಸ್‌.

ವರ್ಷ: 2014

**

ಹಾಕಿಯಲ್ಲಿ ಭಾರತದ ತಂಡಗಳ ಸಾಧನೆ

ಪುರುಷರು

ವರ್ಷ,ಸಾಧನೆ

1998, ನಾಲ್ಕನೇ ಸ್ಥಾನ

2002, –

2006, ಐದನೇ ಸ್ಥಾನ

2010, ಬೆಳ್ಳಿ

2014, ಬೆಳ್ಳಿ

******

ಮಹಿಳೆಯರು

ವರ್ಷ,ಸಾಧನೆ

1998, ನಾಲ್ಕನೇ ಸ್ಥಾನ

2002, ಚಿನ್ನ

2006, ಬೆಳ್ಳಿ

**

ಭಾರತದ ಮೊದಲ ಪದಕ

ಭಾರತ ತಂಡ 1934ರಲ್ಲಿ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು. ಆಗ ಇದನ್ನು ಬ್ರಿಟಿಷ್‌ ಎಂಪೈರ್‌ ಕ್ರೀಡಾಕೂಟ ಎಂದು ಕರೆಯಲಾಗುತ್ತಿತ್ತು.

ಅಥ್ಲೆಟಿಕ್ಸ್‌ ಮತ್ತು ಕುಸ್ತಿಯಲ್ಲಿ ಭಾರತದ ಸ್ಪರ್ಧಿಗಳು ಭಾಗವಹಿಸಿದ್ದರು. ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಹಿರಿಮೆ ಕುಸ್ತಿಪಟು ರಶೀದ್‌ ಅನ್ವರ್‌ ಅವರದ್ದು.

ಪುರುಷರ ವೆಲ್ಟರ್‌ವೇಟ್‌ ವಿಭಾಗದ 74 ಕೆ.ಜಿ. ಸ್ಪರ್ಧೆಯಲ್ಲಿ ಅವರು ಕಂಚು ಗೆದ್ದ ಸಾಧನೆ ಮಾಡಿದ್ದರು.

***

ಎರಡು ಕೂಟ ನಡೆದಿಲ್ಲ

ಮಹಾಯುದ್ದಗಳ ಕಾರಣದಿಂದಾಗಿ 1942 ಮತ್ತು 1946ರ ಕೂಟಗಳು ನಡೆದಿರಲಿಲ್ಲ. ಈ ಕೂಟಗಳು ಕ್ರಮವಾಗಿ ಕೆನಡಾದ ಮಾಂಟ್ರಿಯಲ್‌ ಮತ್ತು ವೇಲ್ಸ್‌ನ ಕಾರ್ಡಿಫ್‌ನಲ್ಲಿ ನಿಗದಿಯಾಗಿದ್ದವು.

ಪ್ರತಿಕ್ರಿಯಿಸಿ (+)