ಶಿಕ್ಷೆ ತುಸು ಹೆಚ್ಚಾಯಿತು

7

ಶಿಕ್ಷೆ ತುಸು ಹೆಚ್ಚಾಯಿತು

Published:
Updated:

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಮಿತ್‌ಗೆ ಕಳ್ಳಾಟಕ್ಕಾಗಿ ನೀಡಿದ ಶಿಕ್ಷೆ ತುಸು ಹೆಚ್ಚಾಯಿತೇನೋ ಅನಿಸುತ್ತಿದೆ. ಆತ ಮಾಡಿದ್ದು ಅಕ್ಷಮ್ಯ ಅಪರಾಧ. ಆದರೆ, ಶಿಕ್ಷೆ ನೀಡುವ ಮೊದಲು ಆತ ತನ್ನ ತಪ್ಪನ್ನು ಒಪ್ಪಿಕೊಂಡು ಜಗತ್ತಿನ ಕ್ಷಮೆ ಕೇಳಿದ್ದನ್ನು ಪರಿಗಣಿಸಬೇಕಿತ್ತು. ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಆತ ಮಾಡಿದ್ದರೆ ಇಂಥ ಶಿಕ್ಷೆ ನೀಡಬಹುದಿತ್ತು.

ಇದಕ್ಕೂ ಹೀನವಾದ ಮ್ಯಾಚ್ ಫಿಕ್ಸಿಂಗ್‌ ಪ್ರಕರಣಗಳನ್ನು ಇಷ್ಟು ಗಂಭಿರವಾಗಿ ಪರಿಗಣಿಸದಿರುವಾಗ, ಈ ಪ್ರಕರಣವನ್ನು ಕ್ರಿಕೆಟ್ ಜಗತ್ತಿನ ಮಹಾ ಅಪರಾಧ ಎಂದೂ ‘ಕ್ರಿಕೆಟ್ ಆಟದ ಅಂತ್ಯ’ ಎಂದೂ ಭಾವಿಸಿದ್ದು ತುಸು ಹೆಚ್ಚಾಯಿತು. ಹಿಂದೆ ಇಂಥ ಕೃತ್ಯಗಳು ನಡೆದಾಗ ವಾರ್ನಿಂಗ್‌ ಕೊಟ್ಟು ಪ್ರಕರಣಗಳಿಗೆ ತೆರೆ ಎಳೆದ ನಿದರ್ಶನಗಳು ಇವೆ.

→ ಅನಿಕೇತ್ ಶರ್ಮಾ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry