ಬುಧವಾರ, ಆಗಸ್ಟ್ 5, 2020
20 °C

ಸಗಟು ಹಣದುಬ್ಬರ 7 ತಿಂಗಳ ಕನಿಷ್ಠ

ಪಿಟಿಐ Updated:

ಅಕ್ಷರ ಗಾತ್ರ : | |

ಸಗಟು ಹಣದುಬ್ಬರ 7 ತಿಂಗಳ ಕನಿಷ್ಠ

ನವದೆಹಲಿ : ತರಕಾರಿ, ಆಹಾರ ಪದಾರ್ಥಗಳು ಅಗ್ಗವಾಗಿರುವುದರಿಂದ ಸಗಟು ದರ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 2.48ಕ್ಕೆ ಇಳಿಕೆಯಾಗಿದೆ.

ಇದು 7 ತಿಂಗಳ ಕನಿಷ್ಠ ಮಟ್ಟವಾಗಿದೆ. ಈ ಹಿಂದೆ ಜುಲೈನಲ್ಲಿ ಶೇ 1.88 ರಷ್ಟು ಕನಿಷ್ಠ ಮಟ್ಟದಲ್ಲಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಹಣದುಬ್ಬರವು 2017ರ ಫೆಬ್ರುವರಿಯಲ್ಲಿ ಶೇ 5.51 ರಷ್ಟಿತ್ತು.

ಆಹಾರ ಪದಾರ್ಥಗಳ ಹಣದುಬ್ಬರ ಶೇ 0.88ಕ್ಕೆ ತಗ್ಗಿದೆ. ತರಕಾರಿಗಳ ಬೆಲೆ ಶೇ 40.77 ರಿಂದ ಶೇ 15.26ಕ್ಕೆ ಇಳಿಕೆ ಕಂಡಿದೆ.ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.