ಏ.5ರ ನಂತರ ಬಿಜೆಪಿಗೆ: ಲಖನ್‌

5

ಏ.5ರ ನಂತರ ಬಿಜೆಪಿಗೆ: ಲಖನ್‌

Published:
Updated:

ಬೆಳಗಾವಿ: ಏ.5ರ ನಂತರ ತಾವು ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಉದ್ಯಮಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಸಹೋದರ ಲಖನ್‌ ಜಾರಕಿಹೊಳಿ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಅವರು ಸೋಮವಾರ (ಏ.2) ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಆ ಸಂದರ್ಭದಲ್ಲಿ ನಾನು ಬಿಜೆಪಿ ಸೇರುವುದಿಲ್ಲ. ಏ. 5ರ ನಂತರ ಸೇರ್ಪಡೆಯಾಗುತ್ತೇನೆ. ಆದರೆ, ಪಕ್ಷದ ಚಟುವಟಿಕೆಗಳನ್ನು ಯಮಕನಮರಡಿಗಷ್ಟೇ ಸೀಮಿತವಾಗಿ ಇಟ್ಟುಕೊಳ್ಳುತ್ತೇನೆ’ ಎಂದರು.

ಜಿಲ್ಲೆಗೆ ಅಮಿತ್‌ ಶಾ ಭೇಟಿ ನೀಡಿದ ಸಂದರ್ಭದಲ್ಲಿ ಲಖನ್‌ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry