ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಗತಿಕರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕೆ.ಆರ್‌.ಆಸ್ಪತ್ರೆಯಲ್ಲಿ ನಿರ್ಗತಿಕರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ನೆರವಿನಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕೆ.ರಾಜ ವಾರ್ಡಿನಲ್ಲಿ ಪುರುಷ ನಿರ್ಗತಿಕರಿಗೆ ಮೀಸಲಿಟ್ಟಿದ್ದ ಕೊಠಡಿಯನ್ನು ನವೀಕರಣಗೊಳಿಸಲಾಗಿದೆ. ಗೋಡೆಗಳಿಗೆ ಬಣ್ಣ ಬಳಿದು ಶೌಚಾಲಯಗಳನ್ನು ದುರಸ್ತಿಗೊಳಿಸಲಾಗಿದೆ. ಸ್ನಾನಕ್ಕೆ ಗೀಜರ್‌ ವ್ಯವಸ್ಥೆ ಮಾಡಲಾಗಿದೆ. ಹೊಸ ಮಂಚ, ಬೆಡ್‌ ಹಾಕಲಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ‘ಅಡಲ್ಟ್‌ ಡೈಪರ್‌’ಗಳನ್ನು ಇಡಲಾಗಿದೆ.

‘ಜೈನ್‌ ಗ್ರೂಪ್‌ ಎಂಬ ಸಂಸ್ಥೆಯ ನೆರವಿನಿಂದ ವಾರ್ಡ್‌ ನವೀಕರಿಸಲಾಗಿದೆ. ಹಲವು ಯುವಕರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಸೌಲಭ್ಯ ಒದಗಿಸಿದ್ದಾರೆ. ಸಾಮಾನ್ಯ ವಾರ್ಡ್‌ನಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಿರ್ಗತಿಕ ಮಹಿಳೆಯರ ವಾರ್ಡ್‌ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಕೆ.ಆರ್‌.ಆಸ್ಪತ್ರೆಯ ಅಧೀಕ್ಷಕ ಡಾ.ಚಂದ್ರಶೇಖರ್‌ ತಿಳಿಸಿದರು.

ಪ್ರಸ್ತುತ ಇಲ್ಲಿ 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರಲ್‌ ವಾರ್ಡಿನಲ್ಲಿ ನಿರ್ಗತಿಕರಿಗೆ ಚಿಕಿತ್ಸೆ ನೀಡುವುದಕ್ಕೆ ಸಾಮಾನ್ಯ ರೋಗಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ರೋಗಿಗಳು ನಿರ್ಗತಿಕರಾಗುತ್ತಿರುವ ಕುರಿತು ಮಾರ್ಚ್‌ 10ರಂದು ‘ಪ್ರಜಾವಾಣಿ’ಯ ‘ಆಳ–ಅಗಲ’ ಬೆಳಕು ಚೆಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT