ಶುಕ್ರವಾರ, ಡಿಸೆಂಬರ್ 6, 2019
25 °C
‘ದಿ ಜೈಂಟ್‌ ಸಂಡೇ’ಯಿಂದ ದಾಖಲೆ

ಗಿನ್ನಿಸ್‌ ದಾಖಲೆಗೆ ಐಸ್‌ಕ್ರೀಮ್‌

ಪಿಟಿಐ Updated:

ಅಕ್ಷರ ಗಾತ್ರ : | |

ಗಿನ್ನಿಸ್‌ ದಾಖಲೆಗೆ ಐಸ್‌ಕ್ರೀಮ್‌

ಹ್ಯೂಸ್ಟನ್‌ : ಜಗತ್ತಿನ ಅತಿ ಉದ್ದದ (1,386.62 ಮೀಟರ್‌) ಐಸ್‌ಕ್ರೀಮ್‌ ಡೆಸರ್ಟ್‌ ಗಿನ್ನಿಸ್‌ ದಾಖಲೆ ಬರೆದಿದೆ. ಸಾವಿರಾರು ಕಾರ್ಯಕರ್ತರು ಸೇರಿ ಈ ಐಸ್‌ಕ್ರೀಮ್‌ ಸಿದ್ಧಪಡಿಸಿದ್ದರು.

ಟೆಕ್ಸಾಸ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ಹಬ್ಬದ ಪ್ರಯುಕ್ತ ‘ದಿ ಜೈಂಟ್‌ ಸಂಡೇ’ ಈ ದಾಖಲೆ ಮಾಡಿದೆ. ಸುಮಾರು 1,892  ಲೀಟರ್‌ ವೆನಿಲಾ ಐಸ್‌ಕ್ರೀಮ್‌ ಮತ್ತು ಕ್ಯಾಂಡಿ ಕ್ರಂಚ್‌ ಚಾಕೊಲೆಟ್‌ ಬಳಸಲಾಗಿದೆ.

1,135 ಲೀಟರ್‌ನಷ್ಟು ಚಾಕೊಲೆಟ್‌ ಮತ್ತು ಸ್ಟ್ರಾಬೆರಿ ಸಿರಪ್‌, 2,000 ಕ್ಯಾನ್‌ ಹಾಲಿನ ಕೆನೆ, 20,000 ಚೆರಿಯಿಂದ ಐಸ್‌ಕ್ರೀಮ್‌ನ ಮೇಲ್ಭಾಗವನ್ನು ಅಲಂಕರಿಸಲಾಗಿತ್ತು.

ಪ್ರತಿಕ್ರಿಯಿಸಿ (+)