‘ಭವಿಷ್ಯ ಅತಂತ್ರಗೊಳಿಸಿದ ಸಿಬಿಎಸ್‌ಇ’

7

‘ಭವಿಷ್ಯ ಅತಂತ್ರಗೊಳಿಸಿದ ಸಿಬಿಎಸ್‌ಇ’

Published:
Updated:

ಕೋಲ್ಕತ್ತ: ಸಿಬಿಎಸ್‌ಇ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಮರುಪರೀಕ್ಷೆ ವಿರುದ್ಧ ಇಲ್ಲಿನ ಹಲವು ವಿದ್ಯಾರ್ಥಿಗಳು ಭಾನುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಗಾರಿಯಾ ಪ್ರದೇಶದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮವಸ್ತ್ರ ಧರಿಸಿ ಪ್ರತಿಭಟನೆ ನಡೆಸಿದರು. ‘ಭವಿಷ್ಯ ಅತಂತ್ರಗೊಳಿಸಿದ ಸಿಬಿಎಸ್‌ಇ’ ಎಂದು ಘೋಷಣೆ ಕೂಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಬಹಳ ಶ್ರಮಪಟ್ಟು ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೇವೆ. ಮರುಪರೀಕ್ಷೆ ನಡೆಯಬಾರದು. ನಮ್ಮದಲ್ಲದ ತಪ್ಪಿಗೆ ನಾವೇಕೆ ಶಿಕ್ಷೆ ಅನುಭವಿಸಬೇಕು’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು.

ಏಪ್ರಿಲ್ 25ಕ್ಕೆ ಅರ್ಥಶಾಸ್ತ್ರ ಪತ್ರಿಕೆಯ ಮರುಪರೀಕ್ಷೆ ನಡೆಯುತ್ತದೆ. ಮರುಪರೀಕ್ಷೆ ತಡವಾಗಿ ನಡೆಯುವುದರಿಂದ ಫಲಿತಾಂಶ ಬರುವುದೂ ತಡವಾಗುತ್ತದೆ. ಇದರಿಂದ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಲು ತೊಂದರೆಯಾಗುತ್ತದೆ. ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲೂ ಸಮಸ್ಯೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry