ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ: ಗೆಲುವಿನತ್ತ ಇಂಗ್ಲೆಂಡ್‌ ತಂಡ

Last Updated 1 ಏಪ್ರಿಲ್ 2018, 19:47 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌ (ಎಎಫ್‌ಪಿ): ಜೇಮ್ಸ್‌ ವಿನ್ಸ್ ಹಾಗೂ ಮಾರ್ಕ್‌ ಸ್ಟೋನ್‌ಮನ್ ಅವರ ಅರ್ಧಶತಕದ ಬಲದಿಂದ ಮುನ್ನಡೆ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಎದು ರಿನ ಎರಡನೇ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ಜಯದತ್ತ ದಾಪುಗಾಲು ಇಟ್ಟಿದೆ.

ಇಂಗ್ಲೆಂಡ್ ತಂಡ ಎರಡು ವರ್ಷಗಳ ಬಳಿಕ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದುಕೊಳ್ಳುವ ಉತ್ಸಾಹದಲ್ಲಿದೆ. ಶನಿವಾರ 74.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 192 ರನ್ ಕಲೆಹಾಕಿದ್ದ ನ್ಯೂಜಿಲೆಂಡ್ ಬಳಗ ಭಾನುವಾರ 278 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಪಡೆ 66 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 202 ರನ್ ಕಲೆಹಾಕಿದೆ. ಇದರಿಂದಾಗಿ ಜೋ ರೂಟ್ ಬಳಗಕ್ಕೆ 231 ರನ್‌ಗಳ ಮುನ್ನಡೆ ಲಭಿಸಿದೆ.

13 ರನ್‌ಗಳಿಂದ ಇನಿಂಗ್ಸ್ ಆರಂಭಿಸಿದ ಟಿಮ್‌ ಸೌಥಿ (50) 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ ಅರ್ಧಶತಕ ಗಳಿಸಿ ಜೇಮ್ಸ್‌ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು. ಬಿ.ಜೆ ವಾಟ್ಲಿಂಗ್‌ (85, 220ಎ, 11ಬೌಂ, 1ಸಿ) ಎಂಟು ರನ್ ಸೇರಿಸುವಲ್ಲಿ ಔಟಾದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ವಿನ್ಸ್, ಸ್ಟೋನ್‌ಮನ್‌ ಅರ್ಧಶತಕ: ಆರಂಭಿಕ ಬ್ಯಾಟ್ಸ್‌ಮನ್‌ ಅಲಸ್ಟೇರ್‌ ಕುಕ್‌ (14) ವಿಕೆಟ್‌ ಒಪ್ಪಿಸಿದ ಬಳಿಕ ಜೊತೆಯಾದ ಮಾರ್ಕ್‌ ಸ್ಟೋನ್‌ಮನ್‌ (60, 139ಎ, 6ಬೌಂ) ಹಾಗೂ ಜೇಮ್ಸ್‌ ವಿನ್ಸ್‌ (76, 128ಎ, 10ಬೌಂ) ಅರ್ಧಶತಕ ದಾಖಲಿಸಿ ತಂಡಕ್ಕೆ ನೆರವಾದರು. ಈ ಜೋಡಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 32ರನ್ ಕಲೆಹಾಕಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: ಮೊದಲ ಇನಿಂಗ್ಸ್‌: 96.5 ಓವರ್‌ಗಳಲ್ಲಿ 307. ದ್ವಿತೀಯ ಇನಿಂಗ್ಸ್‌: 66 ಓವರ್‌ಗಳಲ್ಲಿ 3 ವಿಕೆಟ್‌ಗೆ 202 (ಮಾರ್ಕ್‌ ಸ್ಟೋನ್‌ಮನ್‌ 60, ಜೇಮ್ಸ್ ವಿನ್ಸ್‌ 76, ಜೋ ರೂಟ್ ಬ್ಯಾಟಿಂಗ್‌ 30, ಡೇವಿಡ್ ಮಲಾನ್‌ ಬ್ಯಾಟಿಂಗ್‌ 19; ಟಿಮ್ ಸೌಥಿ 42ಕ್ಕೆ1, ಟ್ರೆಂಟ್ ಬೌಲ್ಟ್‌ 38ಕ್ಕೆ2). ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌: 93.3 ಓವರ್‌ಗಳಲ್ಲಿ 278 (ಬಿ.ಜೆ ವಾಟ್ಲಿಂಗ್‌ 85, ಟಿಮ್‌ ಸೌಥಿ 50; ಜೇಮ್ಸ್ ಆ್ಯಂಡರ್ಸನ್‌ 76ಕ್ಕೆ4, ಸ್ಟುವರ್ಟ್ ಬ್ರಾಡ್‌ 54ಕ್ಕೆ6).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT