ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನದೇ ತಪ್ಪಿದೆ ಎಂಬ ಭಾವನೆ ನನಗೆ ಕಾಡುತ್ತಿದೆ: ಕ್ಯಾಂಡೈಸ್

Last Updated 1 ಏಪ್ರಿಲ್ 2018, 19:59 IST
ಅಕ್ಷರ ಗಾತ್ರ

ಸಿಡ್ನಿ (ಎಎಫ್‌ಪಿ): ‘ಜನರ ಹೀಯಾಳಿಕೆಯ ಮಾತುಗಳು ನನ್ನನ್ನು ಚುಚ್ಚುತ್ತಿವೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನನ್ನದೇ ತಪ್ಪಿದೆ ಎಂಬ ಭಾವನೆ ನನಗೆ ಕಾಡುತ್ತಿದೆ’ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅವರ ಪತ್ನಿ ಕ್ಯಾಂಡೈಸ್ ಹೇಳಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ 31 ವರ್ಷದ ವಾರ್ನರ್‌ ತಮ್ಮ ಮುಂದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಕಣ್ಣೀರಿಡುವ ಮೂಲಕ ಕ್ಷಮೆಯಾಚಿಸಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ಅವರ ಮೇಲೆ ಒಂದು ವರ್ಷದ ಅವಧಿಗೆ ಪ್ರಥಮ ದರ್ಜೆ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ನಿಷೇಧ ಹೇರಿದೆ.

‘ಜನರು ಆಡುವ ಮಾತುಗಳನ್ನು ಕೇಳಿದರೆ ಪ್ರಕರಣದಲ್ಲಿ ನನ್ನದೇ ತಪ್ಪು ಇದೆ ಎಂಬ ಭಾವನೆ ಕಾಡುತ್ತಿದೆ. ವಾರ್ನರ್ ತಪ್ಪು ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ. ಇದಕ್ಕಾಗಿ ನಾನು ಅವರನ್ನು ಕ್ಷಮಿಸಿಲ್ಲ. ಆದರೆ ಅವರ ಮೇಲೆ ನನ್ನ ಹಾಗೂ ಮಕ್ಕಳನ್ನು ರಕ್ಷಿಸುವ ಒತ್ತಡ ಇತ್ತು’ ಎಂದು ಸಂಡೆ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

‘ಪಂದ್ಯ ಆಡಿದ ಬಳಿಕ ವಾರ್ನರ್ ಮನೆಗೆ ಬಂದರು, ಆಗ ನನ್ನ ಕಂಗಳಲ್ಲಿ ನೀರು ಇತ್ತು. ನನ್ನ ಮಕ್ಕಳು ನನ್ನನ್ನೇ ನೋಡುತ್ತಿದ್ದರು. ಈ ಕ್ಷಣ ಅತ್ಯಂತ ದುಃಖಕರವಾದದ್ದು. ಕೇಪ್‌ಟೌನ್‌ ಹಾಗೂ ಪೋರ್ಟ್ ಎಲಿಜಬೆತ್‌ನಲ್ಲಿ ಪಂದ್ಯದ ಬಳಿಕ ಅವರು ಮನೆಗೆ ಬರುತ್ತಿದ್ದರು. ನಾನು ಅವರ ಆಟಕ್ಕೆ ಯಾವಾಗಲೂ ಬೆಂಬಲ ನೀಡಿದ್ದೇನೆ’ ಎಂದು ಕ್ಯಾಂಡೈಸ್ ಹೇಳಿದ್ದಾರೆ.

‘ಆದರೆ ಈಗ ಅವರನ್ನು ನೋಡುವ ರೀತಿ ಬದಲಾಗಿದೆ. ನಮ್ಮನ್ನು ಒಟ್ಟಿಗೆ ನೋಡಿದಾಗ ಜನರು ನಗುತ್ತಾರೆ. ನನ್ನ ಮೇಲೆ ಹಾಡನ್ನು ಕೂಡ ರಚಿಸಲಾಗಿದೆ.  ಇವು ನಮ್ಮ ಕಷ್ಟದ ದಿನಗಳು. ಈ ಸಮಯದಲ್ಲಿ ಆಸ್ಟ್ರೇಲಿಯಾ ಅಭಿಮಾನಿಗಳು ನಮ್ಮ ಮೇಲೆ ಕುರಣೆ ತೋರಿಸಬೇಕು. ತಾಳ್ಮೆಯಿಂದ ವರ್ತಿಸಬೇಕು’ ಎಂದು ಅವರು ಕೇಳಿಕೊಂಡಿದ್ದಾರೆ.

‘ವಾರ್ನರ್‌ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳುವುದು ಸಾಕಷ್ಟಿತ್ತು. ಆದರೆ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಅವರು ತುಂಬಾ ನೊಂದಿದ್ದಾರೆ. ಅವರು ನಿಜವಾಗಲೂ ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಕ್ಯಾಂಡೈಸ್ ಹೇಳಿದ್ದಾರೆ.

ಚೆಂಡುವಿರೂಪಗೊಳಿಸುವುದು ನಿಮ್ಮದೇ ಯೋಜನೆಯಾಗಿತ್ತಾ? ಆಸ್ಟ್ರೇಲಿಯಾ ತಂಡ ಮೊದಲ ಬಾರಿ ಹೀಗೆ ಮಾಡಿದೆ ಎಂದು ನಿಮಗೆ ಅನ್ನಿಸುತ್ತದೆಯೇ, ಬೇರೆ ಆಟಗಾರರಿಗೆ ಮಾಹಿತಿ ಇತ್ತಾ? ಈ ರೀತಿಯ ಪ್ರಶ್ನೆಗಳನ್ನು ವಾರ್ನರ್ ಪತ್ರಿಕಾಗೋಷ್ಠಿಯಲ್ಲಿ ಎದುರಿಸಿದ್ದರು. ಇದರಿಂದಾಗಿ ಅವರ ಒತ್ತಡ ಹೆಚ್ಚಿದೆ ಎಂದು ಕ್ಯಾಂಡೈಸ್ ಹೇಳಿದ್ದಾರೆ.

ಈ ಪ್ರಕರಣ ನಮಗೆ ಎಚ್ಚರಿಕೆಯ ಗಂಟೆ: ಕಾಲಿಸ್‌

ಕೋಲ್ಕತ್ತ (ಪಿಟಿಐ): ‘ಚೆಂಡುವಿರೂಪಗೊಳಿಸಿದ ಪ್ರಕರಣ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ದಕ್ಷಿಣ ಆಫ್ರಿಕಾದ ಹಿರಿಯ ಆಲ್‌ರೌಂಡ್ ಆಟಗಾರ ಜಾಕ್ವೆಸ್‌ ಕಾಲಿಸ್‌ ಹೇಳಿದ್ದಾರೆ.

‘ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಕ್ರಿಕೆಟ್ ಆಟದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತ್ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿರುವ ಕಾಲಿಸ್ ಹೇಳಿದ್ದಾರೆ.

‘ವಿಶ್ವದ ಎಲ್ಲಾ ಆಟಗಾರರು ಈ ಪ್ರಕರಣದಿಂದ ಪಾಠ ಕಲಿಯಬೇಕು. ಮೋಸದ ಆಟಕ್ಕೆ ಭವಿಷ್ಯ ಇಲ್ಲ. ಕ್ರೀಡಾ ಸ್ಫೂರ್ತಿಯೊಂದಿಗೆ ಆಡಬೇಕು’ ಎಂದು ಅವರು ಹೇಳಿದ್ದಾರೆ.

‘ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ ಎಂದು ನಾನು ನಮ್ಮ ತಂಡದ ಆಟಗಾರರಿಗೂ ಹೇಳಿದ್ದೇನೆ. ಕೆಕೆಆರ್ ಉತ್ತಮ ಪೈಪೋಟಿ ನೀಡಲು ಸಜ್ಜಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT