ಮಂಗಳವಾರ, ಜೂಲೈ 7, 2020
27 °C

‘ನನ್ನ ಮಿದುಳೇ ನನ್ನ ಶತ್ರು’: ಡೆತ್ ನೋಟ್ ಬರೆದಿಟ್ಟು ಟಿವಿ ನಿರೂಪಕಿ ಆತ್ಮಹತ್ಯೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ನನ್ನ ಮಿದುಳೇ ನನ್ನ ಶತ್ರು’: ಡೆತ್ ನೋಟ್ ಬರೆದಿಟ್ಟು ಟಿವಿ ನಿರೂಪಕಿ ಆತ್ಮಹತ್ಯೆ

ಹೈದರಾಬಾದ್‌: ‘ನನ್ನ ಮಿದುಳೇ ನನ್ನ ಶತ್ರು’ ಎಂದು ಡೆತ್ ನೋಟ್ ಬರೆದಿಟ್ಟು ಟಿವಿ ನಿರೂಪಕಿ ರಾಧಿಕಾ ರೆಡ್ಡಿ(36), ಐದು ಅಂತಸ್ಥಿನ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೂಸಾಪೇಟ್‌ನಲ್ಲಿ ನಡೆದಿದೆ.

ಘಟನೆ ನಡೆದ ಸ್ಥಳದಲ್ಲಿ ಡೆತ್‌ ನೋಟ್‌ ಸಿಕ್ಕಿದ್ದು, ಅದನ್ನು ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

ರಾಧಿಕಾ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಖನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಕಚೇರಿಯಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ ರಾಧಿಕಾ, ನೇರವಾಗಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ತಿಂಗಳ ಹಿಂದೆ ಗಂಡನಿಂದ ವಿಚ್ಛೇಧನ ಪಡೆದಿದ್ದ ರಾಧಿಕಾ, 14 ವರ್ಷದ ಮಗ ಹಾಗೂ ಪೋಷಕರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ವರದಿಯಲ್ಲಿ ವಿವರಿಸಿದ್ದಾರೆ.

**

"My Brain's My Enemy": TV Anchor Allegedly Commits Suicide In Hyderabad

A TV anchor has allegedly committed suicide in Hyderabad.

HYDERABAD:  An anchor with a news channel in Hyderabad allegedly committed suicide late on Sunday night. Radhika Reddy, 36, jumped off the fifth floor of her apartment building at Hyderabad's Moosapet.

The police have found a suicide note in Ms Reddy's bag, which said, "My brain is my enemy." A case has been filed and an investigation is on. The police believe the TV anchor was suffering from depression.

"Ms Reddy committed suicide shortly after coming back from work," the officer at Kukatpally Police Station told news agency ANI. She came home from work and straight walked up to the terrace and jumped off, said the police.

Ms Reddy died on the spot; she had suffered a severe head injury and multiple fractures.

Reports say, Ms Reddy and her 14-year-old son were staying with her parents since her divorce six months ago. Her son has a mental disability, says the police report.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.