ಶನಿವಾರ, ಡಿಸೆಂಬರ್ 14, 2019
20 °C

ಕುವೈತ್‌: ಭೀಕರ ಅಪಘಾತದಲ್ಲಿ ಏಳು ಭಾರತೀಯರು ಸೇರಿ 15 ಮಂದಿ ದುರ್ಮರಣ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕುವೈತ್‌: ಭೀಕರ ಅಪಘಾತದಲ್ಲಿ ಏಳು ಭಾರತೀಯರು ಸೇರಿ 15 ಮಂದಿ ದುರ್ಮರಣ

ಕುವೈತ್‌: ಎರಡು ಬಸ್ಸುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನ ಭಾರತೀಯರು ಸೇರಿದಂತೆ 15 ಮಂದಿ ತೈಲ ಕಾರ್ಮಿಕರು ಮೃತಪಟ್ಟಿರುವ ಘಟನೆ ದಕ್ಷಿಣ ಕುವೈತ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಏಳು ಭಾರತೀಯರು ಸೇರಿದಂತೆ ಐವರು ಈಜಿಪ್ಟ್‌ ಮತ್ತು ಮೂವರು ಪಾಕಿಸ್ತಾನ ಮೂಲದವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಕುವೈತ್‌ ಅಯಿಲ್‌ ಕಂಪೆನಿಯ ಅಧಿಕಾರಿ ಮೊಹಮ್ಮದ್‌ ಅಲ್‌–ಬಸ್ರಿ ತಿಳಿಸಿದ್ದಾರೆ.

ಅವಘಡದಲ್ಲಿ ಹಲವರು ಗಾಯಗೊಂಡಿದ್ದು, ಒಬ್ಬ ಭಾರತೀಯನ ಸ್ಥಿತಿ ಗಂಭೀರವಾಗಿದೆ.  

ಮೃತರು ಬೋರ್ಗನ್ ಡ್ರಿಲ್ಲಿಂಗ್‌ನ ಕುವೈತ್‌ ಅಯಿಲ್‌ ಕಂಪೆನಿಗೆ (ಕೆಓಸಿ) ಖಾಸಗಿ ಉಪಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರ ಕರ್ನಲ್‌ ಅಲ್‌ ಅಮೀರ್‌ ತಿಳಿಸಿದ್ದಾರೆ.

ತೈಲ ಸಮೃದ್ಧ ರಾಷ್ಟ್ರವಾಗಿರುವ ಕುವೈತ್‌, ವಲಸೆ ಕಾರ್ಮಿಕರ ಹಕ್ಕುಗಳು ಮತ್ತು ಅವರ ಸ್ಥಿತಿಗತಿಗಳ ಕುರಿತಾದ ತನ್ನ ನೀತಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ.

***

7 Indians Among 15 Oil Workers Killed In Bus Collision In Kuwait

Two Indian citizens -- one in critical condition -- and a Kuwaiti were also injured in the accident, Basri told AFP.

KUWAIT CITY:  Fifteen oil workers, most of them from the Indian subcontinent, were killed Sunday in a head-on collision between two buses in southern Kuwait, officials said.

Seven of those killed were Indian nationals, five were Egyptians and the other three from Pakistan, said Mohammed al-Basri of the state-owned Kuwait Oil Company (KOC).

Two Indian citizens -- one in critical condition -- and a Kuwaiti were also injured in the accident, Basri told AFP.

Fire department spokesman Colonel Khalil al-Amir said the victims were employees of Burgan Drilling, a private subcontractor for KOC.

Like the other Arab states of the oil-rich Gulf, Kuwait has drawn international condemnation for its track record on migrant workers' rights and labour conditions.

ಪ್ರತಿಕ್ರಿಯಿಸಿ (+)