ಚನಾವಣೆ ದೂರು ಸಲ್ಲಿಕೆ: ನಿಯಂತ್ರಣ ಕೊಠಡಿ ಸ್ಥಾಪನೆ

7

ಚನಾವಣೆ ದೂರು ಸಲ್ಲಿಕೆ: ನಿಯಂತ್ರಣ ಕೊಠಡಿ ಸ್ಥಾಪನೆ

Published:
Updated:

ಕಲಬುರ್ಗಿ: ವಿಧಾನಸಭೆ ಚನಾವಣೆಯನ್ನು ಶಾಂತಿ, ಸುವ್ಯವಸ್ಥೆ ಮತ್ತು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಸಲ್ಲಿಸಲು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಮತ್ತು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದ್ದಾರೆ.ದೂರು ಸ್ವೀಕರಿಸಲು ಸ್ಥಾಪಿಸಲಾದ ಈ ನಿಯಂತ್ರಣ ಕೊಠಡಿಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸಲಿವೆ.

ವಿವರ ಹೀಗಿದೆ:  ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ಕಲಬುರ್ಗಿ-1077 (ಶುಲ್ಕ ರಹಿತ), ಮೊ. 94486 34567, ಅಫಜಲಪುರ- ದೂ.ಸಂ: 08470-282020, ಮೊ. 77607 88998, ಜೇವರ್ಗಿ- ದೂ.ಸಂ: 08442-236025., ಮೊ. 97392 31678, ಚಿತ್ತಾಪುರ- ದೂ.ಸಂ: 08474-236147, ಮೊ. 98454 13323, ಸೇಡಂ– ದೂ.ಸಂ: 08441-276073, ಮೊ. 96323 70680, ಚಿಂಚೋಳಿ– ದೂ.ಸಂ: 08475-273017, ಮೊ. 97397 00181, ಕಲಬುರ್ಗಿ (ಗ್ರಾಮೀಣ)–ದೂ.ಸಂ: 08472-254448, ಮೊ. 78290 61080, ಕಲಬುರ್ಗಿ (ದಕ್ಷಿಣ)–ದೂ.ಸಂ: 08472-278673/278674, ಮೊ. 97435 22227, ಕಲಬುರ್ಗಿ (ಉತ್ತರ)–ದೂ.ಸಂ: 08472-277791/279734, ಮೊ. 97434 22227 ಮತ್ತು ಆಳಂದ–ದೂ.ಸಂ: 08477-202428, ಮೊ. 90084 21427.

ಶಸ್ತ್ರಾಸ್ತ್ರ ಠೇವಣಿಗೆ ಸೂಚನೆ: ಜಿಲ್ಲೆಯಾದ್ಯಂತ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು (ರಾಷ್ಟ್ರೀಕೃತ ಬ್ಯಾಂಕ್ ಮತ್ತು ಆರ್‌ಬಿಐ ಅನುಮೋದಿತ ಶೆಡ್ಯೂಲ್ ಬ್ಯಾಂಕುಗಳ ಭದ್ರತಾ ಸಿಬ್ಬಂದಿ ಆಯುಧ ಹೊರತುಪಡಿಸಿ) ತಕ್ಷಣದಿಂದಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು ಎಂದು ಜಿಲ್ಲಾ ದಂಡಾಧಿಕಾರಿ ಆರ್.ವೆಂಕಟೇಶ ಕುಮಾರ್ ಸೂಚಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 24ಎ(1) ಅನ್ವಯ ಹೊರಡಿಸಿರುವ ಈ ಆದೇಶದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಅಂದರೆ ಮೇ 18ರ ವರೆಗೆ ಪರವಾನಗಿದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಒಯ್ಯುವುದನ್ನು ಮತ್ತು ಪ್ರದರ್ಶನ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry