ವಿವಿಧೆಡೆ ಶಿವಕುಮಾರಸ್ವಾಮೀಜಿ ಜನ್ಮದಿನಾಚರಣೆ

7

ವಿವಿಧೆಡೆ ಶಿವಕುಮಾರಸ್ವಾಮೀಜಿ ಜನ್ಮದಿನಾಚರಣೆ

Published:
Updated:

ಚಾಮರಾಜನಗರ: ತುಮಕೂರಿನ ಸಿದ್ಧಗಂಗಾ ಮಠದ ಮಠಾಧೀಶರಾದ ಶಿವಕುಮಾರಸ್ವಾಮೀಜಿ ಅವರ 111ನೇ ಜನ್ಮದಿನವನ್ನು ಭಾನುವಾರ ನಗರದ ವಿವಿಧೆಡೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.ಈಶ್ವರಿ ಮ್ಯೂಸಿಕಲ್‌ ಅಕಾಡೆಮಿ ಅಂಡ್‌ ಸೋಷಿಯಲ್‌ ಟ್ರಸ್ಟ್‌ ವತಿ ಯಿಂದ ಇಲ್ಲಿನ ನ್ಯಾಯಾಲಯದ ರಸ್ತೆ ಯಲ್ಲಿ 250ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಲಾಯಿತು.

ಸಸಿ ನೆಟ್ಟು ಮಾತನಾಡಿದ, ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್.ಪಿ.ನಂದೀಶ್‌, ‘ಭೂಮಿಯು ಮನುಷ್ಯನಿಗೆ ಎಲ್ಲ ಸೌಲಭ್ಯವನ್ನು ನೀಡಿದೆ. ಆದರೆ, ಮನುಷ್ಯ ಮಾತ್ರ ಪರಿಸರದ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದಾನೆ. ಹಾಗಾಗಿ, ಪರಿಸರವನ್ನು ಸಂರಕ್ಷಿಸಲು ಪ್ರತಿಯೊಬ್ಬರು ಮುಂದಾಗಬೇಕು. ಮಕ್ಕಳಿಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ತಿಳಿಸಬೇಕು’ ಎಂದರು.ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದಂದು ಈ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಯುವಜನರು ಗಿಡ ನೆಡುವ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ, ರೋಟರಿ ಸಂಸ್ಥೆ ಅಧ್ಯಕ್ಷ ಸುಭಾಷ್, ರೋಟರಿ ಸಿಲ್ಕ್‌ಸಿಟಿ ರಾಜು, ತಾಲ್ಲೂಕು ಔಷಧ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಶಾಂತ್ ಎ ರಾವ್‌, ಈಶ್ವರಿ ಮ್ಯೂಸಿಕಲ್‌ ಅಕಾಡೆಮಿ ಅಂಡ್‌ ಸೋಷಿಯಲ್‌ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ವೆಂಕಟೇಶ್‌ ಹಾಜರಿದ್ದರು.

ಸಿದ್ದಮಲ್ಲೇಶ್ವರ ವಿರಕ್ತ ಮಠ: ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿ ಸುವ ಮೂಲಕ ಗೌರವ ಸಲ್ಲಿಸಲಾಯಿತು. ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಶಿಕ್ಷಣ, ಕಾಯಕ ಹಾಗೂ ಅನ್ನ ದಾಸೋಹದ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಶಿವಕುಮಾರ ಸ್ವಾಮೀಜಿ ಅವರ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮುಖಂಡರಾದ ಕುಮಾರ್, ಮಹದೇವಪ್ರಸಾದ್, ಮಹೇಶ್, ಕೋಟಂಬಳ್ಳಿ ವೀರಭದ್ರಸ್ವಾಮಿ, ರಾ.ಬಾಬು, ಬಸವರಾಜು, ಕೆ.ಎಸ್.ನಾಗರಾಜಪ್ಪ, ಗಿರೀಶ್ ಎಚ್.ಎಸ್., ಮಹೇಶ್ ಪಟೇಲ್, ನಟೇಶ್ ಹಾಜರಿದ್ದರು.

ಜಿಲ್ಲಾಸ್ಪತ್ರೆಯ ಆವರಣ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಡಾ.ಶಿವಕುಮಾರ ಸ್ವಾಮೀಜಿ ಅವರ ಭಕ್ತ ವೃಂದದಿಂದ ಸ್ವಾಮೀಜಿಯ ಜನ್ಮದಿನ ಆಚರಿಸಲಾಯಿತು.ಮುಖಂಡರಾದ ರಾಮಸಮುದ್ರ ಮಹದೇವಸ್ವಾಮಿ, ಆಲೂರು ಮಲ್ಲು, ಹೆಗ್ಗವಾಡಿ ಜಗದೀಶ್, ಜಿ.ಎಂ.ಶಂಕರ್, ನಾಗರಾಜು, ಪ್ರಕಾಶ್, ಮಹೇಶ್, ಚಿನ್ನಸ್ವಾಮಿ, ರಘು, ಪುಟ್ಟಸ್ವಾಮಿ ಇದ್ದರು.

ಅನ್ನ ಸಂತರ್ಪಣೆ

ಹನೂರು: ಶಿವಕುಮಾರಸ್ವಾಮಿಯ 111ನೇ ಜಯಂತಿ ಆಚರಣೆ ಅಂಗವಾಗಿ ಪಟ್ಟಣದ ಗುರುಮಲ್ಲೇಶ್ವರ ಮಠದ ವತಿಯಿಂದ ಖಾಸಗಿ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಪಟ್ಟಣ ಸೇರಿದಂತೆ ಉದ್ದನೂರು, ಮಹಾಲಿಂಗನಕಟ್ಟೆ, ಒಡೆಯರಪಾಳ್ಯ, ಚಿಂಚಳ್ಳಿ, ರಾಮಾಪುರ, ಮಲೆಮಹದೇಶ್ವರ ಬೆಟ್ಟ ಇತರ ಕಡೆ ಜಯಂತಿ ಆಚರಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry