ವೀರಶೈವ ಲಿಂಗಾಯತ ಎರಡೂ ಒಂದೆ

7
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 111 ನೇ ಜನ್ಮ ದಿನಾಚರಣೆ ಸಂಭ್ರಮ

ವೀರಶೈವ ಲಿಂಗಾಯತ ಎರಡೂ ಒಂದೆ

Published:
Updated:

ಗೌರಿಬಿದನೂರು: ವೀರಶೈವ, ಲಿಂಗಾಯತ ಎನ್ನುವುದು ಬೇರೆ ಇಲ್ಲ. ಇವರೆಡೂ ಒಂದೇ. ಇಬ್ಬರೂ ಒಗ್ಗೂಟಿನಿಂದ ಬಾಳುತ್ತಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯ ವೀರಶೈವ ಮಹಾಸಭಾ ಯುವ ಘಟಕದ ಕಾರ್ಯದರ್ಶಿ ಗೌರೀಶ್ ತಿಳಿಸಿದರು.ಪಟ್ಟಣದ ಎಂ.ಜಿ.ವೃತ್ತದಲ್ಲಿ ವೀರಶೈವ ಲಿಂಗಾಯತ ಯುವ ಘಟಕ ಭಾನುವಾರ ಆಯೋಜಿಸಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 111 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಡೆದಾಡುವ ದೇವರು ಎಂದು ಪ್ರಸಿದ್ಧವಾಗಿ ತ್ರಿವಿಧ ದಾಸೋಹ ಮಾಡುತ್ತಿರುವ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ನೀಡಬೇಕು. ಅವರ ಜನ್ಮದಿನವನ್ನು ‘ದಾಸೋಹ ದಿನ’ ಎಂದು ಸರ್ಕಾರ ಘೋಷಿಸಬೇಕು ಎಂದು ತಿಳಿಸಿದರು.

ಸಮುದಾಯದ ಮುಖಂಡ ಸಿದ್ದನಹಳ್ಳಿ ಮಲ್ಲಿಕಾರ್ಜುನ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಸಹಿತ ಲಿಂಗಾಯಿತ, ವೀರಶೈವ ಈ ಎರಡು ಧರ್ಮಗಳು ಒಂದೇ ಎಂದು ಹೇಳಿದ್ದಾರೆ. ಸ್ವಾಮೀಜಿ ಇನ್ನಷ್ಟು ದಿನ ಅರೋಗ್ಯವಾಗಿರಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.

ಮುಖಂಡರಾದ ಎನ್.ವೀರಣ್ಣ, ಮಲ್ಲಿಕಾರ್ಜುನ, ದೇವಿ ಮಂಜುನಾಥ್, ಜಯಣ್ಣ, ನಟರಾಜ, ಹರೀಶ್‌, ನವೀನ್‌, ಶಿವಕುಮಾರ್, ಮಂಜುನಾಥ್‌, ಶಿವಕುಮಾರ್, ಬಸವರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry