ಹುಯಿಲಗೋಳದಲ್ಲಿ 3 ಬಣವೆಗಳಿಗೆ ಬೆಂಕಿ

7

ಹುಯಿಲಗೋಳದಲ್ಲಿ 3 ಬಣವೆಗಳಿಗೆ ಬೆಂಕಿ

Published:
Updated:

ಗದಗ: ತಾಲ್ಲೂಕಿನ ಹುಯಿಲಗೋಳ ಗ್ರಾಮದಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮೂರು ಬಣವೆಗಳು ಸುಟ್ಟು ಹೋಗಿವೆ.ಗ್ರಾಮದ ಸಂತೋಷಕುಮಾರ ನವಲಗುಂದ ಹಾಗೂ ತಿಪ್ಪಣ್ಣ ಗಂಗಪ್ಪನವರ ಎಂಬುವವರಿಗೆ ಸೇರಿದ ಬಣವೆಗಳು ಭಸ್ಮವಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.ಬೆಟಗೇರಿ ವೃತ್ತದ ಕಂದಾಯ ನಿರೀಕ್ಷಕ ಬಸವರಾಜ ಕಣ್ಣೂರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry