ಮಂಗಳವಾರ, ಡಿಸೆಂಬರ್ 10, 2019
26 °C

ನಾಯಕರ ಭಾವಚಿತ್ರ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕರ ಭಾವಚಿತ್ರ ತೆರವಿಗೆ ಆಗ್ರಹ

ಚನ್ನರಾಯಪಟ್ಟಣ: ಜೋಗಿಪುರ ದಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡದಲ್ಲಿ ಹಾಕಿರುವ ರಾಜಕೀಯ ನಾಯಕರಾದ ಎಚ್‌.ಡಿ. ರೇವಣ್ಣ, ಸಿ.ಎನ್‌.ಬಾಲಕೃಷ್ಣ ಭಾವಚಿತ್ರ ತೆರವುಗೊಳಿಸಲು ಅಧ್ಯಕ್ಷೆ ಆಗ್ರಹಿಸಿದ್ದಾರೆ.ಸಂಘದ ಅಧ್ಯಕ್ಷೆ ಬೋರಮ್ಮ ಹಾಗೂ ಕೆಲ ನಿರ್ದೇಶಕರು, ಭಾವಚಿತ್ರ ಹಾಕಿರುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದರು. ಭಾವಚಿತ್ರ ಅಳವಡಿಕೆ ಕೆಲವರ ಬೇಸರಕ್ಕೆ ಕಾರಣವಾಗಿದ್ದು, ಹಾಲು ಸಂಗ್ರದ ಮೇಲೂ ಪರಿಣಾಮ ಬೀರಿದೆ. ಸದ್ಯ ಸಂಘದ ಕಾರ್ಯದರ್ಶಿ ಮನೆಯಲ್ಲಿ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ದೂರಿದರು.ಕಾರ್ಯದರ್ಶಿ ಮನೆಯಲ್ಲಿ ಹಾಲು ಸಂಗ್ರಹಿಸುತ್ತಿರುವ ಕಾರಣ ಕೆಲವರು ಶನಿವಾರ ಸಂಜೆಯಿಂದ ಹಾಲು ಪೂರೈಸುತ್ತಿಲ್ಲ’ ಎಂದು ಹೇಳಿದ್ದಾರೆ. ಡೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಿಸಿ ಎಂದರು.

‘ಹಳೆಯ ಕಟ್ಟಡದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಮನೆಯಲ್ಲಿ ಹಾಲು ಸಂಗ್ರಹಿಸಲಾಗುತ್ತಿದೆ’ ಎಂದು ಕಾರ್ಯದರ್ಶಿ ಮಹಾಲಕ್ಷ್ಮಿ ಹೇಳಿದರು.ಭಾನುವಾರ ಬೆಳಿಗ್ಗೆ ಸಂಘದ ನೂತನ ಕಟ್ಟಡದ ಮುಂದೆ ಎರಡು ಗುಂಪಿನವರು ಜಮಾಯಿಸಿದರು. ಭಾವಚಿತ್ರ ತೆಗೆಯಬೇಕು, ತೆಗೆಯ ಬಾರದು ಎಂದು ಭಿನ್ನ ವಾದ ಮಂಡಿಸಿದ ಕಾರಣ ಗೊಂದಲ ಉಂಟಾಗಿತ್ತು.

ಕಂದಾಯ ನಿರೀಕ್ಷಕ ಮೋಹನ್‌ಕುಮಾರ್‌, ಡೇರಿ ವಿಸ್ತರಣಾಧಿಕಾರಿ ಯೋಗೇಶ್‌ ಭೇಟಿ ನೀಡಿದ್ದರು. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಚುನಾವಣೆವರೆಗೆ ಸಮುದಾಯ ಭವನದಲ್ಲಿ ಉತ್ಪಾದಕರಿಂದ ಹಾಲು ಸಂಗ್ರಹಿಸಬೇಕು ಎಂದು ಸೂಚಿಸಿದರು.

 

ಪ್ರತಿಕ್ರಿಯಿಸಿ (+)