ಮಂಗಳವಾರ, ಡಿಸೆಂಬರ್ 10, 2019
23 °C

ಗೌರಿಬಿದನೂರಿನಲ್ಲಿ ಬ್ಯಾಂಕ್‌ಗೆ ಕನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರಿನಲ್ಲಿ ಬ್ಯಾಂಕ್‌ಗೆ ಕನ್ನ

ಗೌರಿಬಿದನೂರು: ದುಷ್ಕರ್ಮಿಗಳ ತಂಡವೊಂದು ಭಾನುವಾರ ತಡರಾತ್ರಿ ತಾಲ್ಲೂಕಿನ ಸಕ್ಕರೆ ಕಾರ್ಖಾನೆ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಕಟ್ಟಡದ ಗೋಡೆ ಕೊರೆದು ದರೋಡೆ ನಡೆಸಲು ಯತ್ನಿಸಿದೆ.

ಪಟ್ಟಣದ ಹೊರವಲಯದ ನಿರ್ಜನ ಪ್ರದೇಶದಲ್ಲಿರುವ ಬ್ಯಾಂಕ್‌ ಶಾಖೆಗೆ ಹೆಚ್ಚಿನ ಭದ್ರತೆ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಭಾನುವಾರ ರಾತ್ರಿ ಗುಡುಗು ಸಹಿತ ಮಳೆ ಬರುತ್ತಿದ್ದ ವೇಳೆ ಜನ ಸಂಚಾರ ವಿರಳವಾಗಿದ್ದನ್ನು ಗಮನಿಸಿ ಕಟ್ಟಡದ ಹಿಂಭಾಗದ ಗೋಡೆಯಲ್ಲಿ ಕಿಂಡಿ ಕೊರೆದು ಒಳಗೆ ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ದರೋಡೆಕೋರರು ಕಟ್ಟಡದಲ್ಲಿ ಹಣಕ್ಕಾಗಿ ಹುಡುಕಾಡಿ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸ್ಟ್ರಾಂಗ್ ರೂಮ್ ಬಾಗಿಲು ತೆರೆಯಲು ಪ್ರಯತ್ನಿಸಿ ಅದು ಕೈಗೂಡದಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾರೆ ಎಂದರು

ಸೋಮವಾರ ಬೆಳಿಗ್ಗೆ ಬ್ಯಾಂಕ್ ವ್ಯವಸ್ಥಾಪಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಎಸ್‌ಐ ಸಿ.ರವಿಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.

ಪ್ರತಿಕ್ರಿಯಿಸಿ (+)