ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವಚೆ ಹೊಳಪು ಹೆಚ್ಚಿಸುವ ಬೇವು

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

* ಬೇವಿನ ಎಲೆ ಹಾಗೂ ಹಸಿ ಅರಿಶಿನವನ್ನು ಅರೆದು ಮುಖಕ್ಕೆ, ಕೈ, ಕಾಲು, ಕುತ್ತಿಗೆ ಹಚ್ಚುವುದರಿಂದ ಚರ್ಮ ಕಾಂತಿಯಾಗುತ್ತದೆ. ಈ ಮಿಶ್ರಣ ತುರಿಕೆ, ಅಲರ್ಜಿಯಂತಹ ಚರ್ಮ ಸಂಬಂಧಿ ರೋಗವನ್ನು ಕಡಿಮೆ ಮಾಡುತ್ತದೆ.

* ಚಿಕನ್‌ ಪಾಕ್ಸ್‌ ಆದಾಗ ಬೇವಿನ ಪೇಸ್ಟ್‌ ಅನ್ನು ಮೈಗೆ ಹಚ್ಚಿ, ಉಗುರು ಬೆಚ್ಚಗಿನ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಸ್ನಾನ ಮಾಡಿದರೆ ಬೇಗ ಕಡಿಮೆಯಾಗುತ್ತದೆ

* ಬೇವಿನ ಎಲೆಯನ್ನು ಹಸಿಯಾಗಿ ಜಗಿದು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಕ್ತ ಶುದ್ಧಿಯಾಗುತ್ತದೆ. ಕಣ್ಣಿನ
ದೃಷ್ಟಿ ತೀಕ್ಷ್ಣವಾಗುತ್ತದೆ.

* ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುವುದರಿಂದ ಬಾಯಿಯ ದುರ್ಗಂಧ ಹೋಗುತ್ತದೆ.

* ಬೇವಿನ ಎಣ್ಣೆಯನ್ನು ಕೈಕಾಲುಗಳಿಗೆ ತಿಕ್ಕುವುದರಿಂದ ಸೆಳೆತ, ಮಂಡಿನೋವು ಕಡಿಮೆಯಾಗುತ್ತದೆ.

* ಬೇವಿನ ಚಿಗುರೆಲೆಯನ್ನು ತಿಂದರೆ ಮಧುಮೇಹ ಕಾಯಿಲೆಯವರಿಗೆ ಒಳ್ಳೆಯದು.

* ಬೇವಿನ ಎಲೆಯನ್ನು ನುಣ್ಣಗೆ ಅರೆದು ಮುಖಕ್ಕೆ ದಪ್ಪ ಹಚ್ಚಿಕೊಂಡು ಒಂದು ಗಂಟೆ ನಂತರ ತೊಳೆದರೆ ಅಕಾಲಿಕ ಮುಪ್ಪು ಬರಲ್ಲ. ಮೊಡವೆ ಸಮಸ್ಯೆ ನಿವಾರಣೆಯೂ ಆಗುತ್ತದೆ. ಕಣ್ಣಿನ ಸುತ್ತದ ಕಪ್ಪು ವರ್ತುಲ ಕೂಡ ಕಡಿಮೆಯಾಗುತ್ತದೆ

* ಬೇವಿನ ಎಲೆಯನ್ನು ಅರೆದು ತಲೆಗೆ ಹಚ್ಚಿಕೊಳ್ಳಿ. ಅರ್ಧಗಂಟೆಯ ನಂತರ ತೊಳೆದರೆ ತಲೆಹೊಟ್ಟು ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.

* ಒಂದು ಲೋಟ ನೀರಿಗೆ ಒಂದೆರಡು ಹನಿ ಬೇವಿನ ಎಣ್ಣೆ ಹಾಕಿ ಕುಡಿದರೆ ಅಸ್ತಮಾ ರೋಗಿಗಳಿಗೆ ಉಪಯುಕ್ತ

* ಕಹಿಬೇವಿನ ಎಲೆಗಳನ್ನು ತುಪ್ಪದಲ್ಲಿ ಹುರಿದು, ಆರಿದ ಬಳಿಕ ಅರೆದು, ಜೇನು ಮೇಣ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಕೈಕಾಲುಗಳು ಒಡೆಯುವುದು, ಬಿರುಕು ಕಡಿಮೆಯಾಗುತ್ತದೆ.

* ಬೇವಿನ ಎಲೆಗಳನ್ನು ಒಂದು ಗ್ಲಾಸ್‌ ನೀರಿಗೆ ಹಾಕಿಡಿ. ಸ್ವಲ್ಪ ಹೊತ್ತು ಕಳೆದು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಬೇವಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡರೆ ಕಪ್ಪು ಕಲೆ ತೊಲಗಿಸುತ್ತದೆ, ಹೊಳಪಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT