ಆಲಿಕಲ್ಲು ಸಹಿತ ಭಾರಿ ಮಳೆ: ಸಿಡಿಲು ಬಡಿದು ಇಬ್ಬರ ಸಾವು

7

ಆಲಿಕಲ್ಲು ಸಹಿತ ಭಾರಿ ಮಳೆ: ಸಿಡಿಲು ಬಡಿದು ಇಬ್ಬರ ಸಾವು

Published:
Updated:
ಆಲಿಕಲ್ಲು ಸಹಿತ ಭಾರಿ ಮಳೆ: ಸಿಡಿಲು ಬಡಿದು ಇಬ್ಬರ ಸಾವು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಇಬ್ಬರು ರೈತರು ಸಿಡಿಲಿಗೆ ಬಲಿಯಾಗಿದ್ದಾರೆ. ಸುಮಾರು 50 ದ್ರಾಕ್ಷಿ ತೋಟಗಳಿಗೆ ಹಾನಿಯಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನೊಡ್ಡಂಪಲ್ಲಿ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ನರಸಿಂಹಪ್ಪ (60), ಸದಾಶಿವ (48) ಸಿಡಿಲು ಬಡಿದು ಮೃತಪಟ್ಟ ರೈತರು. 

(ಕಮ್ಮಗಾನಹಳ್ಳಿಯಲ್ಲಿ ಆಲಿಕಲ್ಲಿನಿಂದ ಆವೃತ್ತಗೊಂಡ ಜಮೀನು)

ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲಮಂಡಿಕಲ್, ಪೇರೇಸಂದ್ರ, ಶೆಟ್ಟಿಗೆರೆ, ಗೊಲ್ಲವಾರಹಳ್ಳಿ, ಅಡಿಗಲ್, ಪಾತೂರು, ನಲ್ಲಪ್ಪನಹಳ್ಳಿ, ಮಂಡಿಕಲ್, ಕಮ್ಮಗುಟ್ಟಹಳ್ಳಿ ಸುತ್ತಮುತ್ತ ದ್ರಾಕ್ಷಿ ತೋಟಗಳು ಭಾರಿ ಗಾತ್ರದ ಆಲಿಕಲ್ಲಿನ ರಭಸಕ್ಕೆ ಹಾನಿಗೊಂಡಿವೆ. ಆಲಿಕಲ್ಲಿನ ಹೊಡೆತಕ್ಕೆ ದ್ರಾಕ್ಷಿ ಜತೆಗೆ ತರಕಾರಿ, ಹೂವು, ಹಿಪ್ಪು ನೆರಳೆ ಸೊಪ್ಪಿನ ತೋಟಗಳಿಗೂ ಹಾನಿಯಾಗಿದೆ.

(ಆಲಿಕಲ್ಲಿನೊಂದಿಗೆ ಸೆಲ್ಫಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry