ಬುಧವಾರ, ಡಿಸೆಂಬರ್ 11, 2019
26 °C

‘ಬದುಕನ್ನು ಪ್ರೀತಿಸಿ’

Published:
Updated:
‘ಬದುಕನ್ನು ಪ್ರೀತಿಸಿ’

ನೀಲಿ ಚಿತ್ರ ಲೋಕದಿಂದ ಬಾಲಿವುಡ್‌ ಗಲ್ಲಿಯಲ್ಲಿ ನಟಿ ಸನ್ನಿ ಲಿಯೋನ್ ಕಾಣಿಸಿಕೊಂಡಾಗ ಅವರ ಬಗ್ಗೆ ಟೀಕೆಗಳ ಮಹಾಪೂರವೇ ಕೇಳಿಬಂದಿತ್ತು. ನಿಂದನೆಯ ಮಾತು, ಮನಸಿಗೆ ಘಾಸಿ ಮಾಡುವಂಥ ಸಾವಿರಾರು ಇ–ಮೇಲ್‌ಗಳನ್ನೂ ಅವರು ಸಹಿಸಿಕೊಳ್ಳಬೇಕಾಗಿತ್ತು. ಇವೆಲ್ಲಾ ತಾನು ಭಾರತದಲ್ಲಿದ್ದೇನೆ ಎನ್ನುವ ಕಾರಣಕ್ಕೆ ಬಂದ ವಿರೋಧವಲ್ಲ. ಆದರೆ, ಇದು ಸಮಾಜದ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ ಸನ್ನಿ.

ಸನ್ನಿಯ ಬದುಕಿನ ಕಥಾನಕ ಹೇಳುವ ‘ಕರಣ್‌ಜಿತ್‌ ಕೌರ್‌–ದ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಸನ್ನಿ ಲಿಯೋನ್‌’ ಸಿನಿಮಾ ಬಿಡುಗಡೆಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ.

‘ನಾನು ಭಾರತಕ್ಕೆ ಬರಲು ನಿರ್ಧಾರ ಮಾಡಿದ ಮೇಲೆ ಟೀಕೆಗಳು ಶುರುವಾದವು ಎನ್ನುವ ತಪ್ಪು ಕಲ್ಪನೆ ಅನೇಕರಿಗಿದೆ. ಆದರೆ ನನಗೆ 21 ವರ್ಷ ಆದಾಗಿನಿಂದಲೇ ನನ್ನ ಬಗ್ಗೆ ಟೀಕೆಗಳು, ಅವಹೇಳನಕಾರಿ ಇಮೇಲ್‌ಗಳು ಬರುತ್ತಿದ್ದವು. ಇವು ಒಂದು ದೇಶಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಸಮಾಜದ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇನ್ನೊಬ್ಬರ ಬಗ್ಗೆ ಜನರು ಮಾತನಾಡುವಾಗ ಅವರ ಸನ್ನಿವೇಶ ಹೇಗಿರುತ್ತದೆ ಎನ್ನುವುದರ ಬಗ್ಗೆಯೂ ಯೋಚಿಸಬೇಕು’ ಎಂದೂ ಅವರು ಹೇಳಿದ್ದಾರೆ.

‘ನನ್ನ ತಂದೆತಾಯಿಗಳ ಆಸೆಗೆ ವಿರುದ್ಧವಾಗಿ ನಾನು ಅದೆಷ್ಟೋ ದಾರಿಯನ್ನು ಸವೆಸಿದ್ದೇನೆ. ಆದರೆ ಬದುಕಿನ ಪಯಣದ ಬಗೆಗೆ ನನಗೆ ಖುಷಿ ಇದೆ. ಬದುಕಿನಲ್ಲಿ ಏನೇ ಆದರೂ ಅದಕ್ಕೊಂದು ಕಾರಣ ಇರುತ್ತದೆ. ಹೀಗಾಗಿ ಎಲ್ಲರೂ ತಮ್ಮ ಬದುಕನ್ನು ಪ್ರೀತಿಸಲು ಕಲಿಯಬೇಕು’ ಎಂದಿದ್ದಾರೆ ಸನ್ನಿ.

ಪ್ರತಿಕ್ರಿಯಿಸಿ (+)