ಮತ್ತೆ ಜೊತೆಯಾಗಿ...

7

ಮತ್ತೆ ಜೊತೆಯಾಗಿ...

Published:
Updated:
ಮತ್ತೆ ಜೊತೆಯಾಗಿ...

ಅಮಿತಾಭ್‌ ಬಚ್ಚನ್‌ ಅವರ ಜೊತೆ ನಟಿಸಿದ ಮೊದಲ ಚಿತ್ರ ‘ಪಿಂಕ್‌’ನಲ್ಲಿಯೇ ತಾಪ್ಸಿಗೆ ಅಭಿಮಾನಿಗಳ ಮೆಚ್ಚುಗೆ ಸಿಕ್ಕಿತ್ತು. ಅವರಿಬ್ಬರ ನಟನೆಯ ಪಿಂಕ್‌ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ದೊರಕಿತ್ತು. ಸಿನಿಪ್ರೇಮಿಗಳನ್ನು ಮೋಡಿ ಮಾಡಿದ್ದ ಈ ಜೋಡಿ ಇನ್ನೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದೆ ಎಂದು ಬಾಲಿವುಡ್‌ ಗಲ್ಲಿಯಲ್ಲಿ ಗುಸು ಗುಸು ಶುರುವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಸುಜಯ್‌ ಘೋಶ್‌ ನಿರ್ದೇಶನದ ‘ಬದ್ಲಾ’ ಸಿನಿಮಾದಲ್ಲಿ ನಟಿಸಲು ತಾಪ್ಸಿ ಈಗಾಗಲೇ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ. ಅಮಿತಾಭ್‌ ಜೊತೆ ಮಾತುಕತೆ ನಡೆಯುತ್ತಿದ್ದು ಒಪ್ಪಿಗೆ ಸೂಚಿಸಬೇಕಷ್ಟೇ ಎನ್ನಲಾಗುತ್ತಿದೆ. ಕ್ರೈಂ ಥ್ರಿಲ್ಲರ್‌ ಕಥೆ ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಜೂನ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

ಅಮಿತಾಭ್‌, ತಮ್ಮ ನಟನೆಯ ಅಶೋಕ್‌ ಶುಕ್ಲಾ ನಿರ್ದೇಶನದ ‘102 ನಾಟ್‌ ಔಟ್‌’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದರೆ, ತಾಪ್ಸಿ ಅವರು ಅನುರಾಗ್‌ ಕಶ್ಯಪ್‌ ಜೊತೆ ‘ಮನಮರ್ಜಿಯಾನಾ’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry