ಮಂಗಳೂರು ಯುನೈಟೆಡ್‌ ತಂಡಕ್ಕೆ ರೋಚಕ ಜಯ ಎಂಪಿಎಲ್: ಸೂಪರ್‌ ಓವರ್‌ನಲ್ಲಿ ಫೈನಲ್‌ಗೆ ಜಿಗಿತ

7

ಮಂಗಳೂರು ಯುನೈಟೆಡ್‌ ತಂಡಕ್ಕೆ ರೋಚಕ ಜಯ ಎಂಪಿಎಲ್: ಸೂಪರ್‌ ಓವರ್‌ನಲ್ಲಿ ಫೈನಲ್‌ಗೆ ಜಿಗಿತ

Published:
Updated:

ಮಂಗಳೂರು: ಪಣಂಬೂರಿನ ಎನ್‌ಎಂಪಿಟಿ ಮೈದಾನದಲ್ಲಿ ಭಾನುವಾರ ನಡೆದ ಡಿಎನ್‌ಐ ಮಂಗಳೂರು ಪ್ರೀಮಿಯರ್ ಲೀಗ್‌ ಕ್ರಿಕೆಟ್‌ನ  ಎರಡನೇ ಸೆಮಿಫೈನಲ್‌ನಲ್ಲಿ ಮಂಗಳೂರು ಯುನೈಟೆಡ್‌ ತಂಡವು ಸೂಪರ್‌ ಓವರ್‌ನಲ್ಲಿ ಟಿ4 ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿ ಫೈನಲ್‌ಗೆ ನೆಗೆಯಿತು.‌ಮೊದಲು ಬ್ಯಾಟ್‌ ಮಾಡಿದ ಮಂಗಳೂರು ಯುನೈಟೆಡ್‌ ತಂಡ ನಿಗದಿತ 20 ಓವರ್‌ಗಳಲ್ಲಿ 139 ರನ್‍ ಗಳಿಸಿತು. ಟಿ 4 ಸೂಪಕ್‌ ಕಿಂಗ್ಸ್‌ ತಂಡ ಸಹ ಅಷ್ಟೇ ಮೊತ್ತ ಗಳಿಸಿದ್ದರಿಂದ ಸೂಪರ್‌ ಓವರ್‌ ಅವಕಾಶ ಕಲ್ಪಿಸಲಾಯಿತು. ಸೂಪರ್‌ ಓವರ್‌ನಲ್ಲಿ ಟಿ4 ಮುಂದಿಟ್ಟ 7 ರನ್‌ ಗುರಿಯನ್ನು ಕ್ರಮಿಸಿದ ಮಂಗಳೂರು ಯುನೈಟೆಡ್‌ ಫೈನಲ್‌ ಪ್ರವೇಶಿಸಿತು. ಈ ಮೂಲಕ ಈ ಬಾರಿಯ ಎಂಪಿಎಲ್‌ ಕ್ರಿಕೆಟ್‌ ಲೀಗ್‌ನಲ್ಲಿ ರೋಚಕ ಪಂದ್ಯವೊಂದಕ್ಕೆ ಮೈದಾನ ಸಾಕ್ಷಿಯಾಯಿತು.ಇನ್ನೊಂದು ಸೆಮಿಫೈನಲ್‌ನಲ್ಲಿ ಕಾರ್ಕಳ ಗ್ಲೇಡಿಯೇಟರ್ಸ್‌ ತಂಡ 2 ರನ್‌ಗಳಿಂದ ಟೀಂ ಎಲಿಗೆಂಟ್‌ ತಂಡವನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರ್: ಮಂಗಳೂರು ಯುನೈಟೆಡ್: ಪ್ರವೀಣ್ ದುಬೆ 65, ಮೊಹಿತ್ 24, ಶ್ರೀಷ ಆಚಾರ್ 4-0-28-3, ಮೊಹ್ತೆಶ್ಯಾಂ 14-0-18-2, ಅಬ್ದುಲ್ ಮಜೀದ್ 4-0-20-3. ಟಿ4ಸೂಪರ್ ಕಿಂಗ್ಸ್: ಮ್ಯಾಕ್ನಿಲ್ ನೊರೋನ್ನಾ 52, ಅಬ್ದುಲ್ ಮಜೀದ್ 28, ಮೊಹ್ತೆಶ್ಯಾಂ ಅಜೇಯ 16 ಅಕ್ಷಯ್ ಬಲ್ಲಾಳ್ 4-0-21-3, ರಾಜೇಶ್ ಆಚಾರ್ಯ 4-0-19-2, ಲೋಕೇಶ್ ಗೌಡ 4-0-25-1, ಪ್ರವೀಣ್ ದುಬೆ 4-0-30-1

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry