‘ಯಾಸೀನ್‌ಗೆ ಟಿಕೆಟ್‌ ನೀಡದಿದ್ದರೆ ಕಾಂಗ್ರೆಸ್‌ ವಿರುದ್ಧ ಮತ’

7

‘ಯಾಸೀನ್‌ಗೆ ಟಿಕೆಟ್‌ ನೀಡದಿದ್ದರೆ ಕಾಂಗ್ರೆಸ್‌ ವಿರುದ್ಧ ಮತ’

Published:
Updated:

ರಾಯಚೂರು: ‘ಕಾಂಗ್ರೆಸ್‌ ಪಕ್ಷದಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಲ್ಪಸಂಖ್ಯಾತರ ಹಿರಿಯ ನಾಯಕ ಸೈಯದ್ ಯಾಸೀನ್ ಅವರಿಗೆ ರಾಯಚೂರು ನಗರ ಕ್ಷೇತ್ರದ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಮತ ಚಲಾಯಿಸಲಾಗುತ್ತದೆ ಎಂದು ಹೈದರಾಬಾದ್ ಕರ್ನಾಟಕ ಮುಸ್ಲಿಂ ಒಕ್ಕೂಟದ ಸಂಘದ ಸಂಚಾಲಕ ಮಹಮ್ಮದ್ ಅಬ್ದುಲ್ ಹೈ ಫೆರೋಜ್ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯಾಸೀನ್ ಅವರ ಆರೋಗ್ಯ ಸರಿಯಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ಅವರು ಆರೋಗ್ಯವಂತರಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಯಾಸೀನ್ ಅವರಿಗೆ ಟಿಕೆಟ್ ತಪ್ಪಿಸುವ ಯತ್ನಗಳು ನಡೆದಿವೆ. ಇವುಗಳಿಗೆ ಹೈಕಮಾಂಡ್‌ ಮನ್ನಣೆ ನೀಡಬಾರದು’ ಎಂದು ಆಗ್ರಹಿಸಿದರು.

‘ಯಾಸೀನ್‌ ಅವರಿಗೆ ಟಿಕೆಟ್‌ ಅಂತಿಮಗೊಳಿಸುವ ಮೂಲಕ ಹೈಕಮಾಂಡ್‌ ಗೊಂದಲಗಳಿಗೆ ತೆರೆ ಎಳೆಯಬೇಕು. ಹೈ.ಕ. ಭಾಗದಲ್ಲಿ ಒಟ್ಟು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕು’ ಎಂದು ಒತ್ತಾಯಿಸಿದರು.ಈ ಚುನಾವಣೆಯಲ್ಲಿ ಯಾಸೀನ್‌ ಅವರಿಗೆ ಟಿಕೆಟ್‌ ನೀಡಬೇಕು.ಮುಂದೆ ಬೇರೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್‌ ನೀಡಲಿ ಎಂದು ಪ್ರಶ್ನೆಗೆ ಉತ್ತರಿಸಿದರು.

ಶಹಾಜಹಾನ್‌ ಅನ್ಸಾರಿ, ಮೌಲಾನಾ ಫರೀದ ಖಾನಸಾಬ್‌, ಹಾಜಿ ಮಹೆಬೂಬಅಲಿ, ಮಹಮ್ಮದ್ ಇಲಿಯಾಸ್‌ ಪಾಷಸಾಬ್, ಮಹೆಬೂಬ ಆಲಮ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry