ಶುಕ್ರವಾರ, ಡಿಸೆಂಬರ್ 13, 2019
19 °C

ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಎಂ.ಎಸ್‌.ದೋನಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಎಂ.ಎಸ್‌.ದೋನಿ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಮಹೇಂದ್ರ ಸಿಂಗ್‌ ದೋನಿ, ಬಿಲಿಯರ್ಡ್ಸ್‌ ಕ್ರೀಡಾಳು ಪಂಕಜ್‌ ಅಡ್ವಾನಿ ಸೇರಿದಂತೆ ವಿವಿಧ ರಂಗದ ಸಾಧಕರು, ಸಮಾಜ ಸೇವಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪದ್ಮ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಿದರು.

ದೋನಿ ಮತ್ತು ಪಂಕಜ್‌ ಅವರಿಗೆ ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 36ರ ಹರೆಯದ ಎಂ.ಎಸ್‌.ದೋನಿ ತಮಗೆ ಗೌರವ ಸೂಚಕವಾಗಿ ಬಂದಿರುವ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯ ಸಮವಸ್ತ್ರದಲ್ಲಿ ಗಮನ ಸೆಳೆದರು. ಏಳು ವರ್ಷಗಳ ಹಿಂದೆ ಏಪ್ರಿಲ್‌ 2ರಂದು ಮುಂಬೈನ ವಾಂಖೆಡೆ ಅಂಗಳದಲ್ಲಿ ದೋನಿ ನೇತೃತ್ವದ ತಂಡ ಕ್ರಿಕೆಟ್‌ ವಿಶ್ವಕಪ್‌ ಜಯಿಸಿತ್ತು.

ರಾಜ್ಯದವರಾದ ಸಾಹಿತಿ ಡಾ.ದೊಡ್ಡರಂಗೇಗೌಡ ಮತ್ತು ಸಮಾಜ ಸೇವಕಿ ಸೀತವ್ವ ಜೋದತ್ತಿ ಅವರಿಗೆ ಇದೇ ಸಂದರ್ಭದಲ್ಲಿ ಪದ್ಮ ಶ್ರೀ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ವರ್ಷದಲ್ಲಿ 85 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಇದೇ ವರ್ಷದ ಮಾರ್ಚ್‌ 20ರಂದು ಮೊದಲ ಕಂತಿನಲ್ಲಿ ಪ್ರಶಸ್ತಿಗಳನ್ನು ಹಲವು ಸಾಧಕರಿಗೆ ಪ್ರದಾನ ಮಾಡಲಾಗಿತ್ತು. ಇಂದು 43 ಮಹನೀಯರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

 

ಪ್ರತಿಕ್ರಿಯಿಸಿ (+)