ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಬಿನ ಹಾರ...

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚಾಮುಂಡೇಶ್ವರಿ ಕ್ಷೇತ್ರದ ಹೂಟಗಳ್ಳಿಯಲ್ಲಿ ಸೇಬಿನ ಹಣ್ಣುಗಳಿಂದ ಪೋಣಿಸಿದ್ದ ಭಾರಿ ಹಾರವನ್ನು ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕಿದರಂತೆ. ಇಂಥ ಹಾರ– ಅದ್ಧೂರಿ ಸನ್ಮಾನಗಳನ್ನು ಮುಖ್ಯಮಂತ್ರಿ ಏಕೆ ತಿರಸ್ಕರಿಸಬಾರದು? ಈ ವಿಚಾರವಾಗಿ ಅವರು ಏನೇ ಸಮರ್ಥನೆ ನೀಡಿದರೂ ಈ ರೀತಿಯ ಸನ್ಮಾನಗಳನ್ನು ತಿರಸ್ಕರಿಸುವುದೇ ಸೂಕ್ತ ಅನಿಸುತ್ತದೆ.

ಒಂದು ವೇಳೆ, ಸನ್ಮಾನ ಮಾಡಲೇಬೇಕೆಂದು ಬೆಂಬಲಿಗರು ಪಟ್ಟು ಹಿಡಿದರೆ ಅದಕ್ಕೆ ಪರ್ಯಾಯ ಉಂಟು. ಇತ್ತೀಚಿನ ದಿನಗಳಲ್ಲಿ ಟೊಮೆಟೊ, ಕ್ಯಾರೆಟ್, ಈರುಳ್ಳಿಯಂಥ  ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇಂಥ ಅಗ್ಗದ ತರಕಾರಿ ಹಾರವಾದರೂ ಹಾಕಿಸಿಕೊಂಡರೆ ಒಳ್ಳೆಯದು. ಅದರಿಂದ ರೈತರಿಗೆ ಕಿಂಚಿತ್ತು ಪ್ರಯೋಜನವಾದರೂ ಆದೀತು.

ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT