ಪರೀಕ್ಷೆಗೆ ಶುಭ ಕೋರಿದ ಅಪ್ಪ ಮತ್ತೆ ಸಿಗಲಿಲ್ಲ

7

ಪರೀಕ್ಷೆಗೆ ಶುಭ ಕೋರಿದ ಅಪ್ಪ ಮತ್ತೆ ಸಿಗಲಿಲ್ಲ

Published:
Updated:

ಕೊಪ್ಪ (ಮಂಡ್ಯ ಜಿಲ್ಲೆ): ಹೃದಯಾಘಾತವಾಗಿ ನರಳುತ್ತಿದ್ದ ತಂದೆಯೊಬ್ಬರು ಮಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕಳುಹಿಸಿದರು. ಆದರೆ ಮಗಳು ಪರೀಕ್ಷೆ ಬರೆದು ಮನೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದರು.

ಸಮೀಪದ ಚಾಮನಹಳ್ಳಿ ಗ್ರಾಮದ ವಿದ್ಯಾರ್ಥಿನಿ ದರ್ಶಿನಿ ಸೋಮವಾರ ಪರೀಕ್ಷೆಗೆ ಹೊರಟಾಗ ತಂದೆ ತ್ಯಾಗರಾಜು (53) ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ತೆರಳುವಾಗ ‘ನನಗೆ ಏನೂ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಪರೀಕ್ಷೆಗೆ ತಪ್ಪಿಸಿಕೊಳ್ಳಬೇಡ. ವರ್ಷಪೂರ್ತಿ ಓದಿದ ಶ್ರಮ ವ್ಯರ್ಥವಾಗುತ್ತದೆ’ ಎಂದು ತಿಳಿಸಿದರು. ತಂದೆಯ ಮಾತಿನಂತೆ ಪರೀಕ್ಷೆಗೆ ಹೊರಟರು. ಆದರೆ, ಪರೀಕ್ಷೆ ಬರೆದು ಬರುವಷ್ಟರಲ್ಲಿ ತಂದೆ ಶವವಾಗಿ ಮಲಗಿದ್ದರು.

‘ಗುಣಮುಖನಾಗುತ್ತೇನೆ ಎಂದು ಹೇಳಿ ನನ್ನನ್ನು ಪರೀಕ್ಷೆಗೆ ಕಳುಹಿಸಿದರು. ಪರೀಕ್ಷೆ ಬರೆದು ಬರುವಷ್ಟರಲ್ಲಿ ಮರೆಯಾಗಿ‌ದ್ದರು’ ಎಂದು ದರ್ಶಿನಿ ಕಣ್ಣೀರಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry