‘ಅಮಿತ್ ಶಾ ಹೇಳಿಕೆ ಸತ್ಯವಲ್ಲ’: ಮಾತೆ ಮಹಾದೇವಿ

7

‘ಅಮಿತ್ ಶಾ ಹೇಳಿಕೆ ಸತ್ಯವಲ್ಲ’: ಮಾತೆ ಮಹಾದೇವಿ

Published:
Updated:
‘ಅಮಿತ್ ಶಾ ಹೇಳಿಕೆ ಸತ್ಯವಲ್ಲ’: ಮಾತೆ ಮಹಾದೇವಿ

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವ ಕೇಂದ್ರ ಸರ್ಕಾರವನ್ನು ತಲುಪಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಮೇಲೆ ಗೂಬೆ ಕೂರಿಸಲು ನೀಡಿರುವ ಹೇಳಿಕೆಯಷ್ಟೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

‘ದೊಡ್ಡ ಸ್ಥಾನದಲ್ಲಿ ಇರುವವರು ಪೂರ್ವಗ್ರಹಪೀಡಿತರಾಗಿ, ಯಾವ ದಾಖಲೆಯನ್ನೂ ಪರಿಶೀಲಿಸದೇ ಈ ರೀತಿ ಹೇಳುವುದು ಸರಿಯೇ’ ಎಂದೂ ಅವರು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ ಕಾಂಗ್ರೆಸ್‌ ವಿರುದ್ಧ ಹೋರಾಟ ನಡೆಸಿ ಚುನಾವಣೆಯಲ್ಲಿ ಬುದ್ಧಿ ಕಲಿಸುವುದಾಗಿ ಹೇಳುತ್ತಿದ್ದ ಗುರು ವರ್ಗದ ಮಠಾಧೀಶರು, ಈಗ ತಮ್ಮ ನಿಲುವು ಬದಲಿಸಿದ್ದಾರೆ. ಜನರ ಮೇಲೆ ಯಾವುದೇ ಒತ್ತಾಯ ಹೇರುವುದಿಲ್ಲ; ಅವರು ತಮಗೆ ಸರಿ ಎನಿಸಿದವರಿಗೆ ಮತ ಹಾಕಬಹುದು ಎನ್ನುತ್ತಿದ್ದಾರೆ. ಈ ಬದಲಾವಣೆಗೆ ಕಾರಣವೇನು ಎಂಬುದೇ ಆಶ್ಚರ್ಯದ ಸಂಗತಿ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry