ಶುಕ್ರವಾರ, ಡಿಸೆಂಬರ್ 6, 2019
26 °C

ಆರು ಕೇಂದ್ರೀಯ ವಿ.ವಿಗಳಲ್ಲಿ ಯೋಗ ವಿಭಾಗ

ಪಿಟಿಐ Updated:

ಅಕ್ಷರ ಗಾತ್ರ : | |

ಆರು ಕೇಂದ್ರೀಯ ವಿ.ವಿಗಳಲ್ಲಿ  ಯೋಗ ವಿಭಾಗ

ನವದೆಹಲಿ: ಆರು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯೋಗ ಶಿಕ್ಷಣ ವಿಭಾಗ ತೆರೆಯಲು ಮಾನವ ಸಂಪನ್ಮೂಲ ಅಭಿವೃದ್ಧಿ  ಸಚಿವಾಲಯ ಅನುಮತಿ ನೀಡಿದೆ.

ಸಚಿವಾಲಯದ ರಾಜ್ಯ ಸಚಿವ ಸತ್ಯಪಾಲ್‌ ಸಿಂಗ್‌ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಆರು ವಿಶ್ವವಿದ್ಯಾಲಯಗಳ ಪಟ್ಟಿ ಪ್ರಕಟಿಸಿದರು.

‘ಹೇಮಾವತಿ ನಂದನ್‌ ಬಹುಗುಣ ಗರ್ಹಾವಾಲ್‌ ವಿಶ್ವವಿದ್ಯಾಲಯ, ವಿಶ್ವಭಾರತಿ ವಿ.ವಿ, ರಾಜಸ್ತಾನ, ಮಣಿಪುರ ಮತ್ತು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿ.ವಿಗಳಲ್ಲಿ ಯೋಗ ಶಿಕ್ಷಣ ವಿಭಾಗ ತೆರೆಯಲು ಅನುಮತಿ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)