ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಹೊಸ್ತಿಲಲ್ಲಿ ದಕ್ಷಿಣ ಆಫ್ರಿಕಾ

ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯ
Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌ (ಎಎಫ್‌ಪಿ): ನಾಯಕ ಫಾಫ್‌ ಡು ಪ್ಲೆಸಿ (120; 178ಎ, 18ಬೌಂ, 2ಸಿ) ಅವರ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ.

ನ್ಯೂ ವಾಂಡರರ್ಸ್‌ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಹರಿಣಗಳ ನಾಡಿನ ತಂಡ 105 ಓವರ್‌ಗಳಲ್ಲಿ 6 ವಿಕೆಟ್‌ಗೆ 344ರನ್ ಕಲೆಹಾಕಿ ಡಿಕ್ಲೇರ್‌ ಮಾಡಿಕೊಂಡಿತು.

ಗೆಲುವಿಗೆ 612ರನ್‌ಗಳ ಕಠಿಣ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ ತಂಡ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 30 ಓವರ್‌ಗಳಲ್ಲಿ 3 ವಿಕೆಟ್‌ಗೆ 88ರನ್‌ ಪೇರಿಸಿದೆ.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌, 136.5 ಓವರ್‌ಗಳಲ್ಲಿ 488 ಮತ್ತು 105 ಓವರ್‌ಗಳಲ್ಲಿ 6 ವಿಕೆಟ್‌ಗೆ 344 ಡಿಕ್ಲೇರ್ಡ್‌ (ಫಾಫ್‌ ಡು ಪ್ಲೆಸಿ 120, ಎಬಿ ಡಿವಿಲಿಯರ್ಸ್‌ 6, ತೆಂಬ ಬವುಮಾ ಔಟಾಗದೆ 35, ವರ್ನಾನ್‌ ಫಿಲ್ಯಾಂಡರ್‌ ಔಟಾಗದೆ 33; ನೇಥನ್‌ ಲಿಯೊನ್‌ 116ಕ್ಕೆ2, ಪ್ಯಾಟ್‌ ಕಮಿನ್ಸ್‌ 58ಕ್ಕೆ4).

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌, 70 ಓವರ್‌ಗಳಲ್ಲಿ 221 ಮತ್ತು 30 ಓವರ್‌ಗಳಲ್ಲಿ 3 ವಿಕೆಟ್‌ಗೆ 88
(ಜೋ ಬರ್ನ್ಸ್‌ 42, ಪೀಟರ್‌ ಹ್ಯಾಂಡ್ಸ್‌ಕಂಬ್‌ ಬ್ಯಾಟಿಂಗ್‌ 23; ಕೇಶವ್‌ ಮಹಾರಾಜ್‌ 45ಕ್ಕೆ1, ಮಾರ್ನ್‌ ಮಾರ್ಕೆಲ್‌ 18ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT