ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ನಿರಾಸೆ

7

ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ನಿರಾಸೆ

Published:
Updated:

ಬೆಂಗಳೂರು: ಭಾರತದ ಬಾಲಕರ ತಂಡದವರು ಚೀನಾದ ಫೊಷಾನ್‌ನಲ್ಲಿ ನಡೆಯುತ್ತಿರುವ ಫಿಬಾ 16 ವರ್ಷದೊಳಗಿನವರ ಏಷ್ಯಾ ಚಾಂಪಿಯನ್‌ಷಿಪ್‌ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪಂದ್ಯ ದಲ್ಲಿ ಸೋತಿದ್ದಾರೆ.

ಸೋಮವಾರ ನಡೆದ ‍ಹಣಾ ಹಣಿಯಲ್ಲಿ ಭಾರತ 71–92 ಪಾಯಿಂಟ್ಸ್‌ನಿಂದ ಕೊರಿಯಾಕ್ಕೆ ಶರಣಾಯಿತು. ಭಾರತದ ಪರ ಪ್ರಿನ್ಸ್‌ ಪಾಲ್‌ 28 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ರಾಜ್‌ವೀರ್‌ ಮತ್ತು ನಾಯಕ ಹರ್ಷವರ್ಧನ್‌ ಅವರು ಕ್ರಮವಾಗಿ 14 ಮತ್ತು 9 ಪಾಯಿಂಟ್ಸ್‌ ಕಲೆಹಾಕಿದರು.

ಮಂಗಳವಾರ ನಡೆಯುವ ಪಂದ್ಯ ದಲ್ಲಿ ಭಾರತ ತಂಡ ಜಪಾನ್‌ ವಿರುದ್ಧ ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry