ಶುಕ್ರವಾರ, ಡಿಸೆಂಬರ್ 6, 2019
25 °C

ಟೆನಿಸ್‌: ಜಾನ್‌ ಇಸ್ನರ್‌ಗೆ ‍ಪ್ರಶಸ್ತಿ

Published:
Updated:
ಟೆನಿಸ್‌: ಜಾನ್‌ ಇಸ್ನರ್‌ಗೆ ‍ಪ್ರಶಸ್ತಿ

ಮಿಯಾಮಿ (ಎಎಫ್‌ಪಿ): ಅಮೋಘ ಆಟ ಆಡಿದ ಅಮೆರಿಕದ ಜಾನ್‌ ಇಸ್ನರ್‌, ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಇಸ್ನರ್‌ 6–7, 6–4, 6–4ರಿಂದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು ಮಣಿಸಿದರು. ಈ ಹೋರಾಟ ಎರಡು ಗಂಟೆ 29 ನಿಮಿಷ ನಡೆಯಿತು.

ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಪ್ರತಿರೋಧ ಎದುರಿಸಿದ ಇಸ್ನರ್‌ ‘ಟೈ ಬ್ರೇಕರ್‌’ನಲ್ಲಿ ನಿರಾಸೆ ಕಂಡರು.

ಇದರಿಂದ ಎದೆಗುಂದದ ಅವರು ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದು ಜಯದ ತೋರಣ ಕಟ್ಟಿದರು.

ಪ್ರತಿಕ್ರಿಯಿಸಿ (+)