ವಿಶ್ವಾಸದಲ್ಲಿ ಪುಣೆ ಕೋಚ್‌ ರ‍್ಯಾಂಕೊ ಪೊಪೊವಿಚ್‌

ಬುಧವಾರ, ಮಾರ್ಚ್ 20, 2019
31 °C

ವಿಶ್ವಾಸದಲ್ಲಿ ಪುಣೆ ಕೋಚ್‌ ರ‍್ಯಾಂಕೊ ಪೊಪೊವಿಚ್‌

Published:
Updated:
ವಿಶ್ವಾಸದಲ್ಲಿ ಪುಣೆ ಕೋಚ್‌ ರ‍್ಯಾಂಕೊ ಪೊಪೊವಿಚ್‌

ಪುಣೆ (ಪಿಟಿಐ): ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಅಮೋಘ ಸಾಧನೆ ತೋರಿದ ಎಫ್‌ಸಿ ಪುಣೆ ಸಿಟಿ ತಂಡ ಸೂಪರ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲೂ ಗೆಲುವಿನ ತೋರಣ ಕಟ್ಟಲಿದೆ ಎಂದು ಕೋಚ್‌ ರ‍್ಯಾಂಕೊ ಪೊಪೊವಿಚ್ ಅಭಿಪ್ರಾಯಪಟ್ಟಿದ್ದಾರೆ.

ಭುವನೇಶ್ವರದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಪುಣೆ ತಂಡ ಶಿಲ್ಲಾಂಗ್‌ ಲಾಜೊಂಗ್‌ ಎದುರು ಸೆಣಸಲಿದೆ.

‘ಎಲ್ಲ ಪಂದ್ಯಗಳಂತೆ ಈ ಪಂದ್ಯವನ್ನು ಕೂಡ ತಂಡ ಪರಿಗಣಿಸುತ್ತದೆ. ಹೀಗಾಗಿ ಐಎಸ್‌ಎಲ್‌ನಲ್ಲಿ ಆಡಿದಂತೆಯೇ ತಂಡ ಈ ಟೂರ್ನಿಯಲ್ಲೂ ಆಡಲಿದೆ’ ಎಂದು ತರಬೇತಿಯ ನಂತರ ಪೊಪೊವಿಚ್‌ ತಿಳಿಸಿದರು.

‘ಐಎಸ್‌ಎಲ್‌ ನಂತರ ವಿಶ್ರಾಂತಿಯಲ್ಲಿದ್ದ ತಂಡದ ಆಟಗಾರರು ಈಗ ಮತ್ತೆ ಒಂದಾಗಿದ್ದಾರೆ. ಅವರು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಬಲಿಷ್ಠರಾಗಿದ್ದಾರೆ. ಟೂರ್ನಿಯಲ್ಲಿ ಅವರು ಪೂರ್ಣ ಸಾಮರ್ಥ್ಯವನ್ನು ತೋರಲಿದ್ದಾರೆ’ ಎಂದು ಕೋಚ್‌ ಹೇಳಿದರು.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿರುವ ವಿಶಾಲ್ ಕೇತ್ ಅವರನ್ನು ಬಿಟ್ಟರೆ ಐಎಸ್‌ಎಲ್‌ನಲ್ಲಿ ಆಡಿದ ಎಲ್ಲ ಆಟಗಾರರು ತಂಡಕ್ಕೆ ಲಭ್ಯರಿದ್ದಾರೆ. ಇದು ಕೋಚ್‌ ವಿಶ್ವಾಸ ಹೆಚ್ಚಲು ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry