ಪೇಟೆಯಲ್ಲಿ ಖರೀದಿ ಭರಾಟೆ

7
ಹೊಸ ಹಣಕಾಸು ವರ್ಷಕ್ಕೆ ಉತ್ಸಾಹದ ಸ್ವಾಗತ

ಪೇಟೆಯಲ್ಲಿ ಖರೀದಿ ಭರಾಟೆ

Published:
Updated:

ಮುಂಬೈ: ಮುಂಬೈ ಷೇರುಪೇಟೆಯು ಹೊಸ ಹಣಕಾಸು ವರ್ಷಕ್ಕೆ ಉತ್ಸಾಹದ ಸ್ವಾಗತ ಕೋರಿದೆ.

ಬ್ಯಾಂಕಿಂಗ್‌, ಆಟೊಮೊಬೈಲ್‌ ಮತ್ತು ಔಷಧಿ ತಯಾರಿಕಾ ಸಂಸ್ಥೆಗಳ ಷೇರುಗಳಲ್ಲಿನ ಖರೀದಿ ಆಸಕ್ತಿ ಫಲವಾಗಿ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 287 ಅಂಶಗಳಷ್ಟು ಏರಿಕೆ ದಾಖಲಿಸಿತು.

ಮಾರ್ಚ್‌ ತಿಂಗಳಲ್ಲಿ ವಾಹನಗಳ ಮಾರಾಟ ಹೆಚ್ಚಳವು ಆಟೊಮೊಬೈಲ್ ಷೇರುಗಳ  ಬೇಡಿಕೆ ಹೆಚ್ಚಿಸಿತು.

ಟಾಟಾ ಮೋಟರ್ಸ್‌, ಹೀರೊ ಮೋಟೊಕಾರ್ಪ್‌, ಟಿವಿಎಸ್‌ ಮೋಟರ್ಸ್‌, ಟೊಯೊಟಾ, ಬಜಾಜ್‌ ಆಟೊ, ಮಾರುತಿ ಸುಜುಕಿ ಮತ್ತು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳು ಶೇ 7.4ರವರೆಗೆ ಏರಿಕೆ ಕಂಡವು.

ಬ್ಯಾಂಕ್‌ ಷೇರುಗಳೂ ವಹಿವಾಟುದಾರರ ಗಮನ ಸೆಳೆದವು.   ವಿಡಿಯೊಕಾನ್‌ ಸಮೂಹಕ್ಕೆ ಸಾಲ ನೀಡಿರುವ ವಿವಾದವು ಕರಿನೆರಳು ಬೀರಿರುವುದರಿಂದ ಐಸಿಐಸಿಐ ಬ್ಯಾಂಕ್‌ನ ಷೇರು ಬೆಲೆ ಮಾತ್ರ ಶೇ 6ರಷ್ಟು ಕುಸಿತ ಕಂಡಿತು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ವಾರ ಪ್ರಕಟಿಸಲಿರುವ ದ್ವೈಮಾಸಿಕ ಹಣಕಾಸು ನೀತಿಯನ್ನು ವಹಿವಾಟುದಾರರು ಎದುರು ನೋಡುತ್ತಿದ್ದಾರೆ. ವಹಿವಾಟಿನ ಒಂದು ಹಂತದಲ್ಲಿ ಸಂವೇದಿ ಸೂಚ್ಯಂಕವು 33,289 ಅಂಶಗಳಿಗೆ ಏರಿಕೆಯಾಗಿತ್ತು. ಕೊನೆಯಲ್ಲಿ 286 ಅಂಶಗಳ ಹೆಚ್ಚಳ ಕಂಡು 33,255 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 98 ಅಂಶ ಹೆಚ್ಚಳ ದಾಖಲಿಸಿ 10,211 ಅಂಶಗಳಲ್ಲಿ ಅಂತ್ಯಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry