ಶುಕ್ರವಾರ, ಡಿಸೆಂಬರ್ 6, 2019
24 °C

ಸಿದ್ಧಗಂಗಾಶ್ರೀ ಜನ್ಮದಿನ: ತುಳಸಿ ಗಿಡ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ಧಗಂಗಾಶ್ರೀ ಜನ್ಮದಿನ: ತುಳಸಿ ಗಿಡ ವಿತರಣೆ

ಬೆಂಗಳೂರು: ಜೆಡಿಎಸ್ ಮಹಿಳಾ ವಿಭಾಗದ ದಾಸರಹಳ್ಳಿ ಘಟಕದ ವತಿಯಿಂದ ಹೆಸರಘಟ್ಟ ಸಮೀಪದ ಗೆಳೆಯರ ಬಳಗ ಬಡಾವಣೆಯಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನವನ್ನು ಭಾನುವಾರ ಆಚರಿಸಲಾಯಿತು.

ಘಟಕದ ಪದಾಧಿಕಾರಿಗಳು ಮನೆ ಮನೆಗೂ ತೆರಳಿ ತುಳಸಿ ಗಿಡಗಳನ್ನು ವಿತರಿಸಿದರು.

‘ಶಿವಕುಮಾರ ಸ್ವಾಮೀಜಿ ಅವರು ನಮ್ಮ ನಡುವೆ ಇರುವ ನಡೆದಾಡುವ ದೇವರು. ಅವರ ಬದುಕು ಯುವ ಸಮುದಾಯಕ್ಕೆ ಮಾದರಿ. ಶಿಸ್ತು ಹಾಗೂ ಸ್ವಚ್ಛ ಜೀವನ ನಡೆಸುತ್ತಿರುವ ಅವರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ತುಳಸಿ ಗಿಡಗಳನ್ನು ನೀಡಲಾಗಿದೆ’ ಎಂದು ಘಟಕದ ಅಧ್ಯಕ್ಷೆ ರಾಣಿ ಪ್ರತಾಪ್ ಹೇಳಿದರು.

‘ಈ ಹಿಂದೆ ಹೆಣ್ಣು ಮಕ್ಕಳು ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಮಾಡುತ್ತಿದ್ದರು. ಈ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಈ ಪರಂಪರೆಯನ್ನು ಮುಂದುವರಿಸಬೇಕು’ ಎಂದರು.

ಪ್ರತಿಕ್ರಿಯಿಸಿ (+)