ವಸೂಲಿಯಾಗದ ಸಾಲ ಹೆಚ್ಚಳ ಸಾಧ್ಯತೆ: ಕ್ರಿಸಿಲ್

7

ವಸೂಲಿಯಾಗದ ಸಾಲ ಹೆಚ್ಚಳ ಸಾಧ್ಯತೆ: ಕ್ರಿಸಿಲ್

Published:
Updated:

ಮುಂಬೈ: ಬ್ಯಾಂಕ್‌ಗಳ ವಸೂಲಿಯಾಗದ ಸಾಲದ (ಎನ್‌ಪಿಎ) ಪ್ರಮಾಣ ಇನ್ನಷ್ಟು ಏರಿಕೆ ಕಾಣಲಿದೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಸರಾಸರಿ ಎನ್‌ಪಿಎ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 9.4 ರಿಂದ ಶೇ 11ಕ್ಕೆ ಏರಿಕೆ ಕಾಣಲಿದೆ. ಆರ್ಥಿಕ ವರ್ಷದಲ್ಲಿ ಶೇ 11.5ಕ್ಕೆ ಏರಲಿದೆ. ನಂತರ 2019ರ ಮಾರ್ಚ್ ವೇಳೆಗೆ ಶೇ 10.3ಕ್ಕೆ ತಗ್ಗಲಿದೆ ಎಂದು ಸಂಸ್ಥೆಯ ಹಿರಿಯ ನಿರ್ದೇಶಕ ಸೋಮಶೇಖರ್ ವೇಮುರಿ ತಿಳಿಸಿದ್ದಾರೆ.

ಎನ್‌ಪಿಎ ಪ್ರಮಾಣ ಕಡಿಮೆ ಆಗುತ್ತಿದ್ದಂತೆಯೇ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ವೃದ್ಧಿಯಾಗಿ ಕಾರ್ಯಾಚರಣೆ ಲಾಭದಲ್ಲಿ ಏರಿಕೆ ಕಂಡುಬರಲಿದೆ ಎಂದೂ ಅವರು ಹೇಳಿದ್ದಾರೆ.

ಬ್ಯಾಂಕಿಂಗ್‌ ವಂಚನೆಯ ಪ್ರಭಾವ: ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸಾಲ ನೀಡಿಕೆ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪ‍ರಿಣಾಮ ಬೀರಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry