ಹಾಕಿ: ಎಎಸ್‌ಸಿ ತಂಡಕ್ಕೆ ಜಯ

7

ಹಾಕಿ: ಎಎಸ್‌ಸಿ ತಂಡಕ್ಕೆ ಜಯ

Published:
Updated:

ಬೆಂಗಳೂರು: ಎಸ್‌.ಟೊ‍ಪ್ಪೊ ಗಳಿಸಿದ ಎರಡು ಗೋಲುಗಳ ಬಲದಿಂದ ಎಎಸ್‌ಸಿ ತಂಡ ಹಾಕಿ ಕರ್ನಾಟಕ ಲೀಗ್‌ ನಾಲ್ಕನೇ ಆವೃತ್ತಿಯ ಪಂದ್ಯದಲ್ಲಿ ಗೆದ್ದಿದೆ.

ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 4–0 ಗೋಲುಗಳಿಂದ ಡಿವೈಇಎಸ್‌ ‘ಬಿ’ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಎಎಸ್‌ಸಿ ತಂಡ ಒಂಬತ್ತನೇ ನಿಮಿಷದಲ್ಲಿ ಖಾತೆ ತೆರೆಯಿತು. ಶರೀನ್‌ ಚೆಂಡನ್ನು ಗುರಿ ಸೇರಿಸಿದರು.

12ನೇ ನಿಮಿಷದಲ್ಲಿ ಬಿ.ಭೇಂಗ್ರಾ ಗೋಲು ದಾಖಲಿಸಿದ್ದರಿಂದ ತಂಡ 2–0ರ ಮುನ್ನಡೆ ಪಡೆಯಿತು. ನಂತರವೂ ಎಎಸ್‌ಸಿ ಪ್ರಾಬಲ್ಯ ಮೆರೆಯಿತು. ಡಿವೈಇಎಸ್‌ ತಂಡದ ದುರ್ಬಲ ರಕ್ಷಣಾಕೋಟೆಯ ಲಾಭ ಎತ್ತಿಕೊಂಡ ಈ ತಂಡದ ಎಸ್‌. ಟೊಪ್ಪೊ 34ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು.

51ನೇ ನಿಮಿಷದಲ್ಲಿ ಟೊಪ್ಪೊ ಮತ್ತೊಮ್ಮೆ ಕೈಚಳಕ ತೋರಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಅವರು ಅದನ್ನು ಚಾಕಚಕ್ಯತೆಯಿಂದ ಗುರಿ ಮುಟ್ಟಿಸಿ ಎಎಸ್‌ಸಿ ಸಂಭ್ರಮಕ್ಕೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry