ಭಾನುವಾರ, ಡಿಸೆಂಬರ್ 15, 2019
25 °C

ಕೇದಾರನಾಥ ಶುಗರ್ಸ್ ಎಂ.ಡಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇದಾರನಾಥ ಶುಗರ್ಸ್ ಎಂ.ಡಿ ಬಂಧನ

ಕೆರೂರ (ಬಾದಾಮಿ ತಾಲ್ಲೂಕು): ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಮೀಪದ ಕೆರಕಲಮಟ್ಟಿಯ ಕೇದಾರನಾಥ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಕ್ರಮಸಿಂಗ್ ಅಪರಾಧ್ ಅವರನ್ನು ಇಲ್ಲಿನ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ್ದ ರೈತರಿಗೆ ಕೊಟ್ಟಿದ್ದ ₹ 18.65 ಲಕ್ಷ ಮೊತ್ತದ ಚೆಕ್ ಬೌನ್ಸ್ ಆದ ಹಾಗೂ 2009ರಲ್ಲಿ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇವರ ವಿರುದ್ಧ ದೂರು ದಾಖಲಾಗಿತ್ತು. ಈ ಕಾರಣಕ್ಕೆ ವಿಕ್ರಮ್‌ ಸಿಂಗ್‌ ಬಂಧನಕ್ಕೆ ಬಾದಾಮಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

‘ಕೆರೂರ ಪೊಲೀಸರು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಿಕ್ರಮಸಿಂಗ್‌ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಏಪ್ರಿಲ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಅವರ ಪರ ವಕೀಲ ವಿ.ವಿ. ದೊಡ್ಡಪತ್ತಾರ ತಿಳಿಸಿದರು.

ಸದ್ಯಕ್ಕೆ ಕೇದಾರನಾಥ ಶುಗರ್ಸ್ ಬಂದ್ ಆಗಿದೆ.

ಪ್ರತಿಕ್ರಿಯಿಸಿ (+)