ಹಾವು ಕಚ್ಚಿ ಯುವಕ ಸಾವು

7

ಹಾವು ಕಚ್ಚಿ ಯುವಕ ಸಾವು

Published:
Updated:

ಬೆಂಗಳೂರು: ಬಾಗಲಗುಂಟೆಯ ರಾಯಲ್ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಹಾವು ಕಚ್ಚಿ ತಮಿಳುನಾಡಿನ ಯುವಕ ಮಹರಾಜನ್ ಸೋಮವಾರ ಮೃತಪಟ್ಟಿದ್ದಾರೆ.

ಮಹರಾಜನ್, ಹಾವನ್ನು ಹಿಡಿಯುವ ಹಾಗೂ ಅದರ ಜತೆ ಆಟವಾಡುವ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಮಧ್ಯಾಹ್ನ ನಾಗರಹಾವು ಕಾಣಿಸಿಕೊಂಡಿತ್ತು. ಜನರನ್ನು ಕಂಡ ಅದು ಭಯಗೊಂಡು ಪೊದೆಯೊಂದರಲ್ಲಿ ಅಡಗಿತ್ತು. ಆ ಬಗ್ಗೆ ತಿಳಿದ ಮಹರಾಜನ್ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಬರಿಗೈಯಲ್ಲಿ ಅದನ್ನು ಹಿಡಿದಿದ್ದರು. ಆಗಲೇ ಅದು ಕಚ್ಚಿದೆ ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.

ಹಾವು ಕಚ್ಚಿರುವುದೇ ಅವರಿಗೆ ಗೊತ್ತಾಗಿಲ್ಲ. ಅದರ ಜತೆ ರಸ್ತೆ ಮಧ್ಯೆದಲ್ಲಿ ಆಟವಾಡುತ್ತಿದ್ದ ಅವರು ಕೆಲ ಹೊತ್ತಿನಲ್ಲಿಯೇ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry