ಮಂಗಳವಾರ, ಡಿಸೆಂಬರ್ 10, 2019
26 °C

ಹಫೀಜ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ರಾಜಕೀಯ ಪಕ್ಷ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹಫೀಜ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ರಾಜಕೀಯ ಪಕ್ಷ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ

ನ್ಯೂಯಾರ್ಕ್‌: ಮುಂಬೈ ದಾಳಿಯ ಸಂಚುಕೋರ, ಲಷ್ಕರ್ ಎ ತಯ್ಯಿಬ (ಎಲ್‌ಇಟಿ) ಉಗ್ರ ಹಫೀಜ್ ಸಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷವನ್ನು ಅಮೆರಿಕ ಸರ್ಕಾರ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.

ಎಂಎಂಎಲ್‌ನ ಕೆಲವು ನಾಯಕರನ್ನೂ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.

ಎಂಎಲ್‌ನ ಉಪಾಧ್ಯಕ್ಷ ಮುಜಮ್ಮಿಲ್ ಇಕ್ಬಾಲ್ ಹಾಶಿಮಿ, ಜಂಟಿ ಕಾರ್ಯದರ್ಶಿ ಮುಹಮ್ಮದ್ ಹ್ಯಾರಿಸ್ ದರ್, ಮಾಹಿತಿ ಕಾರ್ಯದರ್ಶಿ ತಬೀಶ್ ಖಯ್ಯುಮ್, ಹಣಕಾಸು ಕಾರ್ಯದರ್ಶಿ ಮುಹಮ್ಮದ್ ಎಶಾನ್ ಮತ್ತು ಫೈಸಲ್ ನದೀಮ್ ಅನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.

ಎರಡು ಪ್ರತ್ಯೇಕ ಕಾನೂನುಗಳಡಿ ಎಂಎಂಎಲ್‌ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ (ಎಫ್‌ಟಿಒ) ಮತ್ತು ವಿಶೇಷವಾಗಿ ಗೊತ್ತುಪಡಿಸಲಾದ ಜಾಗತಿಕ ಭಯೋತ್ಪಾದಕ (ಎಸ್‌ಡಿಜಿಟಿ) ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

‘ಪಾಕಿಸ್ತಾನದಲ್ಲಿ ಎಲ್‌ಇಟಿ ಮುಕ್ತವಾಗಿ ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕ ರ್‍ಯಾಲಿಗಳನ್ನು ಆಯೋಜಿಸುತ್ತಿದೆ. ನಿಧಿ ಸಂಗ್ರಹಿಸುತ್ತಿದೆ. ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿರುವುದಲ್ಲದೆ, ದಾಳಿಗೆ ತರಬೇತಿ ನೀಡುತ್ತಿದೆ’ ಎಂದು ಇಲಾಖೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.

ಎಲ್‌ಇಟಿಯ ಮತ್ತೊಂದು ಸಂಘಟನೆ ತೆಹ್ರೀಕ್–ಇ–ಆಜಾದಿ–ಇ–ಕಾಶ್ಮೀರ್‌ (ಟಿಎಜಿಕೆ) ಅನ್ನೂ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿದೆ.

ಇನ್ನಷ್ಟು...

ನಿರಾಕ್ಷೇಪಣಾ ಪತ್ರ: ಸಯೀದ್‌ ಪಕ್ಷಕ್ಕೆ ಸೂಚನೆ

ಪಕ್ಷದ ಕಚೇರಿ ಉದ್ಘಾಟಿಸಿದ ಹಫೀಜ್‌

ಪ್ರತಿಕ್ರಿಯಿಸಿ (+)