ಸಂತೆ ಅವ್ಯವಸ್ಥೆ: ವರ್ತಕರು, ಗ್ರಾಹಕರು ಕಂಗಾಲು

7

ಸಂತೆ ಅವ್ಯವಸ್ಥೆ: ವರ್ತಕರು, ಗ್ರಾಹಕರು ಕಂಗಾಲು

Published:
Updated:

ಕುಳಗೇರಿ ಕ್ರಾಸ್: ಸಂತೆ ಆರಂಭವಾಗಿ 20 ರಿಂದ 30 ವರ್ಷ ಕಳೆದಿದೆ. ಸುತ್ತಲಿನ ಕುಳಗೇರಿ, ನರಸಾಪುರ, ಖಾನಾಪುರ, ಚಿಮ್ಮನಕಟ್ಟಿ, ಕಾಕನೂರ ತಪ್ಪಸಕಟ್ಟಿ, ಕಲ್ಲಾಪುರ ಎಸ್.ಕೆ, ಹನುಮಸಾಗರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಸಂತೆಗೆ ಬಂದು ಹೋಗುತ್ತಿದ್ದಾರೆ.

ಆದರೆ ಸಂತೆಯಲ್ಲಿ ನೀರು ಹಾಗೂ ನೆರಳಿನ ಆಸರೆ ಇಲ್ಲದೇ ಗ್ರಾಹಕರು, ವ್ಯಾಪಾರಸ್ಥರು ಕಂಗಾಲಾಗುತ್ತಿದ್ದಾರೆ. ಒಂದೆಡೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಉರಿ ಬಿಸಿಲಿನ ನಡುವೆ ಸುಧಾರಿಸಿಕೊಳ್ಳಲು ನೆರಳಿನ ಆಸರೆ ಇಲ್ಲ. ಜೊತೆಗೆ ಬಾಯಾರಿಕೆ ನೀಗಿಸಿಕೊಳ್ಳಲು ನೀರಿನ ವ್ಯವಸ್ಥೆಯೂ ಇಲ್ಲ.

‘ಸಂತೆಗೆ ಬಂದವರು ಅಕ್ಕಪಕ್ಕದ ಮನೆಗಳಿಗೆ ಕೇಳಿ ನೀರು ಕೇಳಿ ಪಡೆಯಬೇಕಾದ ಪರಿಸ್ಥಿತಿ ಇದೆ’ ಎಂಬುದು ಸ್ಥಳೀಯರ ದೂರಾಗಿದೆ.

'ಪಂಚಾಯ್ತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ಸಾರ್ವಜನಿಕರ ಸಮಸ್ಯೆ ತಿಳಿಯುತ್ತದೆ. ಆಗಲಾದರೂ ಅವರು ಕಣ್ತೆರೆಯಲಿ' ಎಂದು ವ್ಯಾಪಾರಸ್ಥರಾದ ಸೈದುಮಾ ಮೂಲಿಮನಿ, ಲಕ್ಷ್ಮವ್ವ, ಶೋಭಾ ಬೂದಿಹಾಳ ಬಸವರಾಜ ಹಾದಿಮನಿ, ಅಕ್ಕೂಬಾಯಿ ಅರಗಂಜಿ ಒತ್ತಾಯಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry