ಗುರುವಾರ , ಡಿಸೆಂಬರ್ 12, 2019
20 °C
ಚೇತರಿಕೆ ಕಂಡ ಬೀನ್ಸ್, ಬೀಟ್ರೂಟ್, ಟೊಮೆಟೊ ದರ ಯಥಾಸ್ಥಿತಿ

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾವಿನಕಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾವಿನಕಾಯಿ

ಚಾಮರಾಜನಗರ: ಜಿಲ್ಲೆಗೆ ಮಾವಿನಕಾಯಿಯ ಆವಕವಾಗಿದ್ದು, ಬೆಲೆ ದುಬಾರಿಯಾಗಿದೆ. ಕನಿಷ್ಠ ಎಂದರೂ ಒಂದು ಮಾವಿನಕಾಯಿ ₹ 10ಕ್ಕೆ ಮಾರಾಟವಾಗುತ್ತಿದೆ.ನಗರದ ಅಲ್ಲಲ್ಲಿ ಮಾವಿನಕಾಯಿ ಗಳನ್ನು ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ವ್ಯಾಪಾರಸ್ಥರು ವ್ಯಾಪಾರಕ್ಕೆ ಅಣಿಯಾಗಿದ್ದಾರೆ. ಬೆಲೆ ದುಬಾರಿಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾವಿನಕಾಯಿಗಳು ಮಾರಾಟವಾಗುತ್ತಿಲ್ಲ.ಈಗ ಬಂದಿರುವ ಬಹಳಷ್ಟು ಮಾವಿನಕಾಯಿಗಳು ಗಿಣಿಮಾವಿನಕಾಯಿ ತರಹವೇ ನೋಡುವುದಕ್ಕೆ ಇದೆ. ಆದರೆ, ಇವು ಕಸಿ ಮಾಡಿದ ಕಾಯಿಗಳು. ಕೆಲವೇ ಕೆಲವು ಮಂದಿ ಮಾತ್ರ ಇಂತಹ ಮಾವಿನಕಾಯಿಗಳ ತೋಟವನ್ನು ಹೊಂದಿದ್ದಾರೆ. ಹೀಗಾಗಿ, ಕಡಿಮೆ ಸಂಖ್ಯೆಯಲ್ಲಿ ಕಾಯಿಗಳು ಮಾರುಕಟ್ಟೆಗೆ ಬಂದಿವೆ. ಸಹಜವಾಗಿಯೇ ಬೆಲೆ ಹೆಚ್ಚಿದೆ ಎಂದು ಮಾವಿನಕಾಯಿ ವ್ಯಾಪಾರಿ ಪುಟ್ಟಲಿಂಗಪ್ಪ ತಿಳಿಸಿದರು.ಈ ಮಾವಿನಕಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಹುಳಿ ಅಂಶವನ್ನು ಹೊಂದಿವೆ. ವಿದ್ಯಾರ್ಥಿಗಳು, ಹಳ್ಳಿಗಾಡಿನಿಂದ ಬಂದವರೇ ಈ ಕಾಯಿಯ ಗ್ರಾಹಕರಾಗಿದ್ದಾರೆ.

ಬೀನ್ಸ್, ಹಸಿರುಮೆಣಸಿನಕಾಯಿ ದರದಲ್ಲಿ ಹೆಚ್ಚಳ: ಬೀನ್ಸ್ ಮತ್ತು ಹಸಿರಮೆಣಸಿನಕಾಯಿ ದರದಲ್ಲಿ ಈ ವಾರ ಹೆಚ್ಚಳವಾಗಿದೆ. ಇದರಿಂದ ಬೆಳೆಗಾರರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಟೊಮೆಟೊ, ಬೀಟ್ರೂಟ್ ದರಗಳಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಮಾಂಸದ ದರದಲ್ಲಿ ವ್ಯತ್ಯಾಸ ಇಲ್ಲ ಕುರಿ ಹಾಗೂ ಮೇಕೆ ಮಾಂಸದ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕುರಿ ಮಾಂಸ ಕೆ.ಜಿಗೆ ₹ 400ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.ಕಳೆದ ವಾರ ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್‌ ಸಗಟು ದರವು ಬ್ರಾಯ್ಲರ್ ಕೋಳಿ ಕೆ.ಜಿಗೆ ₹ 58 ಹಾಗೂ ಬ್ರಾಯ್ಲರ್ ಪ್ರೇರೇಂಟ್ ಕೋಳಿ ಬೆಲೆ ₹ 78 ಇತ್ತು. ಈಗ ಬ್ರಾಯ್ಲರ್ ಕೋಳಿ ಬೆಲೆ ₹ 76 ಆಗಿದ್ದರೆ, ಬ್ರಾಯ್ಲರ್ ಪ್ರೇರೇಂಟ್ ಕೋಳಿ ಬೆಲೆ ಕೆ.ಜಿಗೆ ₹ 72 ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಚಿಕನ್ ಕೆ.ಜಿಗೆ ₹  140ರಲ್ಲಿ ಮಾರಾಟವಾಗುತ್ತಿದೆ.

ಮತ್ತಷ್ಟು ಇಳಿದ ಮೊಟ್ಟೆದರ: ಕೋಳಿ ಮೊಟ್ಟೆ ದರ ಈ ವಾರ ಮತ್ತಷ್ಟು ಇಳಿಕೆ ಕಂಡಿದೆ. ಇದರಿಂದ ಕೋಳಿಮೊಟ್ಟೆ ಉತ್ಪಾದಕರು ಪರಿತಪಿಸುವಂತಾಗಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.40 ಇದ್ದದ್ದು, ಇದೀಗ ₹ 3.28ಕ್ಕೆ ಇಳಿದಿದೆ.

ಪ್ರತಿಕ್ರಿಯಿಸಿ (+)