ಮಂಗಳವಾರ, ಆಗಸ್ಟ್ 11, 2020
21 °C

ಸಂತ್ರಸ್ತ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಂತ್ರಸ್ತ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ನವದೆಹಲಿ: ಮೂರು ವರ್ಷಗಳ ಹಿಂದೆ ಇರಾಕ್‌ನ ಮೋಸುಲ್‌ನಲ್ಲಿ ಐಎಸ್‌ ಉಗ್ರರಿಂದ ಹತ್ಯೆಯಾದ 39 ಮಂದಿ ಭಾರತೀಯ ಸಂಸ್ರತ್ತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ಅವರು ಇರಾಕ್‌ಗೆ ತೆರಳಿ ಮೃತದೇಹಗಳ ಅವಶೇಷಗಳ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ನೋಡಿಕೊಂಡಿದ್ದರು.

ಮೃತ ಸಂಸ್ರತ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಮಂಗಳವಾರ ಸಂಸತ್‌ ಎದುರು ಪಂಜಾಬ್‌ನ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ನಡೆಸಿದ್ದರು. 

39 ಮೃತರ ಪೈಕಿ 27 ಮಂದಿ ಪಂಜಾಬ್ ಮೂಲದರಾಗಿದ್ದು, ಮೃತದೇಹಗಳನ್ನು ಅವರವರ ಕುಟುಂಬ ಸದಸ್ಯರಿಗೆ ವಿ.ಕೆ. ಸಿಂಗ್ ಅವರು ಹಸ್ತಾಂತರ ಮಾಡಿದ್ದರು.

ಸಂತ್ರಸ್ತರ ಕುಟುಂಬಗಳಿಗೆ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ, ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ತಿಳಿಸಿದ್ದರು.

ಇನ್ನಷ್ಟು...

ಉಗ್ರರಿಂದ ಹತ್ಯೆಯಾದ 39 ಭಾರತೀಯರು; ಮೃತದೇಹಗಳು ದೇಶಕ್ಕೆ ಹಸ್ತಾಂತರ

ಅಪಹೃತರ ಅವಶೇಷ ಪತ್ತೆ

ವಾರದಲ್ಲಿ 39 ಮಂದಿ ಮೃತದೇಹಗಳು ಭಾರತಕ್ಕೆ: ಸುಷ್ಮಾ ಸ್ವರಾಜ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.