ಭಾನುವಾರ, ಡಿಸೆಂಬರ್ 15, 2019
25 °C

ತ್ಯಾಜ್ಯ ತೆರವುಗೊಳಿಸಿ; ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ಯಾಜ್ಯ ತೆರವುಗೊಳಿಸಿ; ಮನವಿ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಚರಂಡಿಗಳು ತ್ಯಾಜ್ಯದಿಂದ ತುಂಬಿ ತುಳುಕುತ್ತಿದ್ದರೂ ತೆರವುಗೊಳಿಸಲು ಸಿಬ್ಬಂದಿ ಮುಂದಾಗುತ್ತಿಲ್ಲ.ಹಲವೆಡೆ ಚರಂಡಿಗಳಲ್ಲಿ ಹಾಗೂ ರಸ್ತೆಯಲ್ಲಿ ತ್ಯಾಜ್ಯದ ರಾಶಿ ತುಂಬಿ ತುಳುಕುತ್ತಿದೆ. ಇದನ್ನು ತೆರವುಗೊಳಿಸುವಂತೆ ಪಂಚಾಯಿತಿಗೆ ಹಲವು ಭಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಂಚಾಯಿತಿ ವ್ಯಾಪ್ತಿಯ ಶಿವಾಜಿ ರಸ್ತೆಯ ಚರಂಡಿ ಹಲವು ಸಮಯದಿಂದ ಮಣ್ಣು ತುಂಬಿದ್ದು, ಮಳೆ ಬಂದಾಗ ಕೆಸರುಮಯವಾಗಿರುತ್ತದೆ. ಇದರಿಂದ ಕಾಯಿಲೆ ಬರುವ ಆತಂಕ ಎದುರಾಗಿದೆ. ಈ ಕಾರಣದಿಂದ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಕೆ.ಎಲ್‌.ಪವಿತ್ರಾ, ಶಿವಾಜಿ ರಸ್ತೆ

ಪ್ರತಿಕ್ರಿಯಿಸಿ (+)