7

ಮಳೆ, ಗಾಳಿಗೆ ಮರ ಬಿದ್ದು ಮನೆಗೆ ಹಾನಿ

Published:
Updated:

ಬಿಳಿಕೆರೆ: ಗ್ರಾಮದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯರಾತ್ರಿ ಬಿರುಗಾಳಿ ಸಹಿತ ಮಳೆಗೆ ಮನೆಯೊಂದರ ಮೇಲೆ ಮರ ಬಿದ್ದು ಮನೆ ಚಾವಣಿ ಜಖಂಗೊಂಡಿದ್ದು, ಸಿಡಿಲಿಗೆ ತೆಂಗಿನ ಮರಗಳು ಸುಟ್ಟು ಹೋಗಿವೆ.ಸಿಡಿಲಿನ ರಭಸಕ್ಕೆ ಮರವು ಮಹದೇವ ಎಂಬುವವರ ಮನೆಯ ಮೇಲೆ ಬಿದ್ದು ಹೆಂಚುಗಳು ಹೊಡೆದು ಹೋಗಿವೆ. ದಿನಬಳಕೆಯ ವಸ್ತುಗಳಿಗೂ ಹಾನಿಯಾಗಿವೆ. ಈ ವೇಳೆ ಮನೆಯಲ್ಲಿ ಮಲಗಿದ್ದವರು ಸಣ್ಣಪುಟ್ಟ ಗಾಯಗಳಾಗಿವೆ.ಸಬ್ಬನಹಳ್ಳಿ ಗ್ರಾಮದ ರಾಜಪ್ಪ ಎಂಬುವವರ ತೋಟದಲ್ಲಿದ್ದ ಕೆಲ ತೆಂಗಿನ ಮರಗಳು ಸಿಡಿಲು ಬಡಿದು ಸುಟ್ಟು ಹೋಗಿವೆ.ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಮಹದೇವ್ ಅವರ ಮನೆಗೆ ಭೇಟಿ ನೀಡಿದರು. ಅಧಿಕಾರಿಗಳು ಬಂದು ಹಾನಿಯ ಬಗ್ಗೆ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry